ಅಮೃತಭಾರತಿಯಲ್ಲಿ ಸೇವಾ ಸಂಗಮ ಶಿಶು ಮಂದಿರದ ಪ್ರಾರಂಭೋತ್ಸವ

0
8

ಹೆಬ್ರಿ : ಸೇವಾ ಸಂಗಮ ಶಿಶು ಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಟ್ರಸ್ಟ್ ನ ಸದಸ್ಯ ಸುಧೀರ್ ನಾಯಕ್ ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಪೋಷಕರಿಂದ ಮತ್ತು ಸ್ವಸ್ಥ ಸಮಾಜದಿಂದ ಆಗಬೇಕು ಈ ನಿಟ್ಟಿನಲ್ಲಿ ಉತ್ತಮ ಸಂಸ್ಕಾರ ನೀಡುವ ಸಂಸ್ಥೆಗಳು ಬೇಕು ಎಂದು ತಿಳಿಸಿದರು.

ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟಾಣಿಗಳನ್ನು ಸಾಂಪ್ರದಾಯಿಕವಾಗಿ ಚೆಂಡೆ ವಾದನ, ಪೌರಾಣಿಕ ವೇಷಭೂಷಣದ ಮೂಲಕ ಶೋಭಾ ಯಾತ್ರೆ ನಡೆಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಮೃತ ಭಾರತಿ ಟ್ರಸ್ಟ್ ನ ಬಾಲಕೃಷ್ಣ ಮಲ್ಯ,ರಾಜೇಶ್ ನಾಯಕ್, ಶೈಲೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಹೆಚ್ ವೈ, ಅಪರ್ಣಾ ಆಚಾರ್, ಶಕುಂತಲಾ, ಪಿ ಆರ್ ಓ ವಿಜಯಕುಮಾರ್ ಶೆಟ್ಟಿ ಹಾಗೂ ಶಿಶು ಮಂದಿರದ ಸದಸ್ಯರಾದ ಆಶಾ ನಾಯಕ್, ಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು.

ಶಿಶು ಮಂದಿರದ ಮುಖ್ಯ ಶಿಕ್ಷಕಿ ಮೀನಾಕ್ಷಿ ಸ್ವಾಗತಿಸಿ, ಮಲ್ಲಿಕಾ ವಂದಿಸಿ, ಅನಿತಾ ನಿರೂಪಿಸಿ, ನಿವೇದಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here