9 ಬೇಡಿಕೆಗಳೊಂದಿಗೆ ಅಮಿತ್ ಶಾ ಭೇಟಿಯಾದ ಡಿಕೆಶಿ..!

0
32

ನವದೆಹಲಿ : ಮುಖ್ಯಮಂತ್ರಿ D. K. Shivakumar ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ Amit Shah ಅವರನ್ನು ಭೇಟಿ ಮಾಡಿ ಕರ್ನಾಟಕದ ಪೊಲೀಸ್ ಇಲಾಖೆ ಹಾಗೂ ಭದ್ರತಾ ವ್ಯವಸ್ಥೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ 9 ಮಹತ್ವದ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ದೆಹಲಿಯ ಕರ್ತವ್ಯಭವನದಲ್ಲಿ ನಡೆದ ಭೇಟಿಯ ವೇಳೆ ರಾಜ್ಯದ ಪೊಲೀಸ್ ವ್ಯವಸ್ಥೆ ಆಧುನೀಕರಣ, ಸೈಬರ್ ಅಪರಾಧ ನಿಯಂತ್ರಣ, ಜೈಲುಗಳ ಸುಧಾರಣೆ, ಸಿಸಿಟಿವಿ ವ್ಯವಸ್ಥೆಗಳ ಮೇಲ್ದರ್ಜೀಕರಣ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಡಿಕೆಶಿ ಸಲ್ಲಿಸಿದ 9 ಪ್ರಮುಖ ಬೇಡಿಕೆಗಳು

  1. ಕರ್ನಾಟಕ ರಾಜ್ಯ ಪೊಲೀಸ್‌ಗೆ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ಮಂಜೂರು.
  2. ವಿಜಯನಗರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಎರಡು ಹೊಸ ಇಂಡಿಯಾ ರಿಸರ್ವ್ ಬೆಟಾಲಿಯನ್‌ಗಳ ಸ್ಥಾಪನೆ.
  3. ನಾಲ್ಕು ಪ್ರಮುಖ ನಗರಗಳಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳ ನಿರ್ಮಾಣ.
  4. ಪೊಲೀಸ್ ಚಟುವಟಿಕೆಗಳನ್ನು ಸಿಎಸ್‌ಆರ್‌ ನಿಧಿ ವ್ಯಾಪ್ತಿಗೆ ಸೇರಿಸುವುದು.
  5. ಪೊಲೀಸ್ ತರಬೇತಿ ಸಂಸ್ಥೆಗಳ ಮೂಲಸೌಕರ್ಯ ಮೇಲ್ದರ್ಜೀಕರಣ.
  6. ಕಾರಾಗೃಹಗಳ ಆಧುನೀಕರಣಕ್ಕಾಗಿ 20 ಕೋಟಿ ರೂ. ಬಿಡುಗಡೆ.
  7. ಮೋಟಾರು ವಾಹನ ನಿಯಮ 52-A ಅನುಷ್ಠಾನದ ಗಡುವು ವಿಸ್ತರಣೆ.
  8. ಪೊಲೀಸ್ ಠಾಣೆಗಳಲ್ಲಿನ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳ ಸುಧಾರಣೆ.
  9. ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್ (K4C) ಸ್ಥಾಪನೆಗೆ ಅನುಮೋದನೆ.

ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳು, ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯ ಆಧುನೀಕರಣದ ಅಗತ್ಯವನ್ನು ಕೇಂದ್ರದ ಗಮನಕ್ಕೆ ತಂದಿದ್ದು, ಈ ಎಲ್ಲಾ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here