ದಾವಣಗೆರೆ : ಧನಾತ್ಮಕ ಚಿಂತನೆಯೊಂದಿಗೆ ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾನವನ ಜೀವನಕ್ಕೆ ಆರೋಗ್ಯ ಭಾಗ್ಯ. ಪ್ರತಿನಿತ್ಯ ಬೆಳಗಿನ ಜಾವ ಎದ್ದು ಯೋಗದೊಂದಿಗೆ ಸತ್ಸಂಗ ಸ್ನೇಹಿತರೊಡನೆ ಮಿಲನ ಆಗಿದರೆ ಜ್ಞಾನಶಕ್ತಿ, ಪರಿಜ್ಞಾನ ಹೆಚ್ಚುತ್ತದೆ. ಅನಾರೋಗ್ಯಕ್ಕೆ ಪರಿಹಾರ ಸಿಗುವುದು.
ಯೋಗ ಜ್ಞಾನ ನಿರಂತರವಾಗಿ ಯೋಗ ಮಾಡಿದರೆ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಎಂದು ಶ್ರೀ ಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರದ ಸಂಸ್ಥಾಪಕರು, ಯೋಗ ಶಿಕ್ಷಕರಾದ ಕೆ. ಕರಿಬಸಪ್ಪನವರು ದಾವಣಗೆರೆಯ ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಆಶ್ರಯದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಉಚಿತ ಯೋಗ ಶಿಬಿರ ಗಿಡಕ್ಕೆ ನೀರೆರೆದು ಉದ್ಘಾಟನೆಯಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್ ಮಾತನಾಡಿ, ಯೋಗ, ಧ್ಯಾನ ಕೇವಲ ಮನರಂಜನೆಗೆ ಸೀಮಿತವಾಗದೇ ಎಲ್ಲರ ಆರೋಗ್ಯ ಭಾಗ್ಯ ಪ್ರಜ್ವಲಗೊಳಿಸಲು ನಾಂದಿ. ಕೇವಲ ಅಂತರಾಷ್ಟಿçÃಯ ಯೋಗ ದಿನಾಚರಣೆಗೆ ಬದ್ಧರಾಗದೇ ಜೀವನ ಪರ್ಯಂತ ಯೋಗ ಧ್ಯಾನಗಳನ್ನು ನಿರಂತರವಾಗಿ ರೂಢಿಸಿಕೊಳ್ಳಬೇಕು ಎಂದರು.
ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರಾಸ್ತಾವನೆಯಾಗಿ ಮಾತನಾಡಿ, ಪ್ರತೀ ವರ್ಷ ಈ ಉಚಿತ ಯೋಗ ಶಿಬಿರ ನಡೆಯುತ್ತಿರುವುದು ದೇವರ ಭಾಗ್ಯ. ಸುಮಾರು 30 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆಯವರು ಆಗಮಿಸಿ ಸುಮಾರು 5 ಸಾವಿರ ಮಕ್ಕಳಿಗೆ ಅಷ್ಟಾಂಗ ಯೋಗ ಶಿಬಿರ ಕಲಾಕುಂಚದಿAದ ನಡೆಸಿಕೊಟ್ಟರು ಎಂದರು.
ಯೋಗ ಶಿಕ್ಷಕಿಯರಾದ ಲೀಲಾ ಸುಭಾಶ್, ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಹಿರಿಯ ಯೋಗ ಶಿಕ್ಷಕಿ ಸಾಕೂ ಸುರೇಶ್ ಪೈ ಉಪಸ್ಥಿತರಿದ್ದರು.
ಸಾಕೂ ಸುರೇಶ್ ಪೈರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ರೇಣುಕಾ ರಾಮಣ್ಣ ಸ್ವಾಗತಿಸಿದರು, ಮಮತಾ ಕೊಟ್ರೇಶ್ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಪ್ರಧಾನ ಕಾರ್ಯದರ್ಶಿ ಸುಮಾ ಏಕಾಂತಪ್ಪ ವಂದಿಸಿದರು.
ಹಿರಿಯ ಯೋಗ ಶಿಕ್ಷಕಿ ಸಾಕೂ ಸುರೇಶ್ ಪೈ ಹಾಗೂ ಕೆ. ಕರಿಬಸಪ್ಪ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಗಿದೆ ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿದ್ದಾರೆ.

