ಜಾನಪದ ಸಾಂಸ್ಕೃತಿಕ ಹಬ್ಬಕ್ಕೆ ಸಿದ್ಧತೆ

0
38

ಮಂಗಳೂರಿನ ಕೊಲ್ಯದಲ್ಲಿ ಮಹಿಳೆಯರಿಗಾಗಿ ಜಾನಪದ ಸಮೂಹ ಗಾಯನ ಸ್ಪರ್ಧೆ

​ನಮ್ಮ ಮಣ್ಣಿನ ಸೊಗಡು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಉಳ್ಳಾಲ ತಾಲೂಕು ಘಟಕವು ಹೆಜ್ಜೆಯಿಟ್ಟಿದೆ.

ಕೊಲ್ಯದ ಶ್ರೀ ಶಾರದಾ ಮಂದಿರದ ಸಭಾಂಗಣದಲ್ಲಿ ಜೂನ್ 12ರ ಭಾನುವಾರದಂದು ಬೆಳಿಗ್ಗೆ 9:30ಕ್ಕೆ ಮಹಿಳೆಯರಿಗಾಗಿ ವಿಶೇಷ ‘ಜಾನಪದ ಸಮೂಹ ಹಾಡು ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ.

ಆಧುನಿಕತೆಯ ಅಬ್ಬರದ ನಡುವೆಯೂ ಗ್ರಾಮೀಣ ಬದುಕಿನ ಜೀವಂತಿಕೆಯನ್ನು ಎತ್ತಿಹಿಡಿಯಲು ಹಾಗೂ ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

​ ಸ್ಪರ್ಧೆಯಲ್ಲಿ ಭಾಗವಹಿಸಲು ಕೆಲವು ಆಕರ್ಷಕ ಹಾಗೂ ಕಡ್ಡಾಯ ನಿಯಮಗಳನ್ನು ರೂಪಿಸಲಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿದ್ದು, ಪ್ರತಿ ತಂಡದಲ್ಲಿ ಹಿಮ್ಮೇಳ ಸೇರಿದಂತೆ ಒಟ್ಟು ಐದು ಜನ ಸದಸ್ಯರಿಗೆ ಮಾತ್ರ ಅವಕಾಶ

ಗಾಯನಕ್ಕೆ ಪೂರಕವಾಗಿ ಹಿಮ್ಮೇಳದಲ್ಲಿ ಕೇವಲ ‘tamki ‘ ವಾದ್ಯವನ್ನು ಮಾತ್ರ ಬಳಸಲು ಅವಕಾಶವಿದ್ದು, ಇದರಲ್ಲಿ ಪುರುಷರು ಮತ್ತು ಮಕ್ಕಳು ಭಾಗವಹಿಸಬಹುದಾಗಿದೆ.

ಪ್ರತಿಯೊಂದು ತಂಡಕ್ಕೂ ಗರಿಷ್ಠ 6 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಕಣಕ್ಕಿಳಿಯುವ ಎಲ್ಲಾ ತಂಡಗಳು ಕಡ್ಡಾಯವಾಗಿ ಆಕರ್ಷಕ ಸಮವಸ್ತ್ರ ಧರಿಸಿ ಪ್ರದರ್ಶನ ನೀಡಬೇಕಾಗಿ ವಿನಂತಿಸಲಾಗಿದೆ.

​ಮೊದಲು ನೋಂದಾಯಿಸಿಕೊಳ್ಳುವ ಕೇವಲ 12 ತಂಡಗಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸೀಮಿತ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಯಲ್ಲಿ ವಿಜೇತರಾಗುವ ಮೂರು ಅತ್ಯುತ್ತಮ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು, ಜೊತೆಗೆ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಇಂತಹ ಸ್ಪರ್ಧೆಗಳು ನಮ್ಮ ಜಾನಪದ ಸಿರಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ನೆರವಾಗುವುದರಿಂದ, ಕಲಾಭಿಮಾನಿ ಮಹಿಳೆಯರು ತಡಮಾಡದೆ ಇಂದೇ ತಮ್ಮ ತಂಡಗಳನ್ನು ನೋಂದಾಯಿಸಿ ಈ ಜಾನಪದ ಹಬ್ಬವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.

-ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here