ಐಸಿಎಐ ಉಡುಪಿ ಶಾಖೆ , ಸಿಕಾಸಾ (SICASA) ವತಿಯಿಂದ, CA ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮ್ಮೇಳನ “ಯುಕ್ತಾ 2026

0
34

ಉಡುಪಿ : ಐಸಿಎಐನ ಬೋರ್ಡ್ ಆಫ್ ಸ್ಟಡೀಸ್ (Operations) ಸಹಯೋಗದಲ್ಲಿ – ಐಸಿಎಐ ಉಡುಪಿ ಶಾಖೆ (SIRC) ಹಾಗೂ ಐಸಿಎಐ ಉಡುಪಿ ಶಾಖೆಯ ಸಿಕಾಸಾ (SICASA) ವತಿಯಿಂದ, CA ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನ “ಯುಕ್ತಾ 2026 – Integrated Minds | Infinite Possibilities” ಅನ್ನು ಜೂನ್ 12 ಮತ್ತು 13, 2026 ರಂದು ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಜರಗಿತು .

ಈ ಸಮ್ಮೇಳನದ ಮುಖ್ಯ ಅತಿಥಿಯಾಗಿ ಐಸಿಎಐ ಕೇಂದ್ರ ಸಮಿತಿ ಸದಸ್ಯರಾದ ಸಿಎ. ಅರ್ಪಿತ್ ಜಗದೀಶ್ ಕಬ್ರಾ  ಕಾರ್ಯಕ್ರಮವನ್ನು  ದೀಪ  ಬೆಳಗಿಸಿ ಉದ್ಘಾಟಿಸಿದರು , ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಶ್ರದ್ದೆ , ಕಠಿಣ  ಪರಿಶ್ರಮ  ದೊಂದಿಗೆ  ಸಿ ಎ  ವಿದ್ಯಾಬ್ಯಾಸ ಕಲಿಯಿರಿ  ,  ಸಾಧನೆಗೆ ಪ್ರತಿಫಲ ಖಂಡಿತ  ದೊರೆಯುತ್ತದೆ , ಭಾರತದಲ್ಲಿ  ಲೆಕ್ಕಪರಿಶೋಧಕರಿಗೆ  ಉತ್ತಮ ಬೇಡಿಕೆಯಿದೆ , ವೃತ್ತಿಪರ ಬೆಳವಣಿಗೆ ಹಾಗೂ ಭವಿಷ್ಯದ ಅವಕಾಶಗಳ  ಬಹಳಷ್ಟು ಇದೆ   , ಹಿರಿಯರ  ಮಾರ್ಗದರ್ಶನದಲ್ಲಿ  ತರಬೇತಿ   ಪಡೆದು ಉತ್ತಮ   ಸಿ ಎ  ಗಳಾಗಿ ರೊಪಗೊಳ್ಳುವಂತೆ ಶುಭ ಹಾರೈಸಿದರು.  

ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ. ಎಂ. ರಾಘವೇಂದ್ರ ಮೊಗೇರಾಯ  ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿಯಾದ    ಸಿಎ. ಅರ್ಪಿತ್ ಜಗದೀಶ್ ಕಬ್ರಾ  ರವರನ್ನು ಗೌರವಿಸಲಾಯಿತು .

ಉಪಾಧ್ಯಕ್ಷರಾದ ಸಿಎ. ಅಶ್ವತ್ ಜೆ. ಶೆಟ್ಟಿ, ಮಾಜಿ ಅಧ್ಯಕ್ಷೆ ಹಾಗೂ ಖಜಾಂಚಿಯಾದ ಸಿಎ. ಅರ್ಚನಾ ಆರ್. ಮೈಯ್ಯ  ಕಾರ್ಯದರ್ಶಿ ಸಿಎ. ಕೆ. ಲಕ್ಷ್ಮೀಶ ರಾವ್,  ಸಿಕಾಸಾ  ಅಧ್ಯಕ್ಷರಾದ  ಸಿಎ. ಸೋನಿತ್ ಎಸ್. ಶೆಟ್ಟಿ, ಶಾಖೆಯ ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ  ನೂರಾರು ಸಿಎ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here