ಉಡುಪಿ, ಪುತ್ತೂರು : ರಜತಪೀಠಪುರ ಪುತ್ತೂರಿನ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಅಂಬಾಗಿಲು ಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ಸಪ್ತಗಿರಿ ಜ್ಞಾನಹಸ್ತದ ನೇತೃತ್ವದಲ್ಲಿ ಇದೇ ಜೂನ್ 21ರಿಂದ 27ರವರೆಗೆ ಪ್ರತಿದಿನ ಸಂಜೆ 05:00 ರಿಂದ 07:30.ವರೆಗೆ ಶ್ರೀಮದ್ ಭಾಗವತ ಸಪ್ತಾಹ ಪ್ರವಚನ ಕಾರ್ಯಕ್ರಮವು ನಡೆಯಲಿದೆ.
ಏಳು ದಿನಗಳ ಕಾಲ ನಡೆಯುವ ಈ ಆಧ್ಯಾತ್ಮಿಕ ಮಹೋತ್ಸವದಲ್ಲಿ ಖ್ಯಾತ ವಿದ್ವಾಂಸರಾದ ಶ್ರೀ ಶ್ರೀಶ ಭಟ್ ಮುದರಂಗಡಿ ಹಾಗೂ ಕುತ್ಪಾಡಿ ಶ್ರೀ ಕೃಷ್ಣ ರಾಜ್ ಆಚಾರ್ಯ ಅವರಿಂದ ಶ್ರೀಮದ್ ಭಾಗವತ ಮಹಾಪುರಾಣದ ಪ್ರವಚನ ನಡೆಯಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಸಮಾರೋಪ ದಿನವಾದ ಜೂನ್ 27ರಂದು ಶ್ರೀದೇವರಿಗೆ ಸಮಾಜ ಭಾಂದವರಿಂದ “ಲಕ್ಷ ತುಳಸಿ ಅರ್ಚನೆ” ನಡೆಯಲಿದೆ.

ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಕೃಪೆ ಪಾತ್ರರಾಗುವಂತೆ ಸಪ್ತಗಿರಿ ಜ್ಞಾನಹಸ್ತ ಹಾಗೂ ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

