
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಹಾಗೂ ಕ್ರೀಡಾ ಭಾರತಿ ಹೆಬ್ರಿ ತಾಲೂಕು ಇವರ ಸಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು .
ಅಮೃತ ಭಾರತಿ ಟ್ರಸ್ಟ್ ನ ಸದಸ್ಯರು, ಯೋಗ ಸಾಧಕರು ಆದ ಹೆಚ್ .ಬಾಲಕೃಷ್ಣ ಮಲ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ನಮ್ಮ ಪುರಾತನ ಯೋಗದ ಪ್ರಯೋಜನಗಳು ಬೆಟ್ಟದಷ್ಟು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿ -ಮುನಿ ಗಳು ನೀಡಿದ ಯೋಗ ಕೊಡುಗೆ ಇಂದು ವಿಶ್ವ ಮಾನ್ಯತೆ ಪಡೆದದ್ದು ಸಂತೋಷ ಎಂದರು.
ಸಭಾ ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಭಾರತಿಯ ಗೌರವಾಧ್ಯಕ್ಷರು , ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿಗಳು ಆದ ಗುರುದಾಸ್ ಶೆಣೈ ಯವರು ಮಾತನಾಡಿ, ಪತಂಜಲಿ ಮಹರ್ಷಿಗಳು ನೀಡಿದ ಅಷ್ಟಾಂಗ ಯೋಗಗಳನ್ನು ಮೈಗೂಡಿಸಿಕೊಂಡರೆ ನಮ್ಮ ಜೀವನ ಸಂಪೂರ್ಣ ಪರಿಪಕ್ವವಾಗುತ್ತದೆ. ವಿದ್ಯಾರ್ಥಿಗಳು ನಿತ್ಯ ಯೋಗ ಮಾಡಿ ಉತ್ತಮ ಅಂಕ ಗಳಿಸಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು. ಕ್ರೀಡಾ ಭಾರತಿ ಹೆಬ್ರಿ ತಾಲೂಕು ಕಾರ್ಯದರ್ಶಿ , ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಪಿ. ಆರ್ . ಓ. ವಿಜಯ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಚೀಫ್ ವಾರ್ಡನ್ ವಿರೂಪಾಕ್ಷ ಕಾರ್ಯಕ್ರಮ ನಿರೂಪಿಸಿ, ಜಂಬಯ್ಯ ವಂದಿಸಿದರು.
ಕ್ರೀಡಾ ಭಾರತಿ ಸದಸ್ಯರಾದ ಪ್ರವೀಣ್ ಹೆಗ್ಡೆ , ನಿಶಾನ್, ರವೀಂದ್ರ ಶೆಟ್ಟಿ, ಮಾಲಿನಿ, ಪಾವನ , ನಿಲಯ ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ವಿಜಯ್ ಕುಮಾರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಯೋಗ ಆಸನಗಳು ಮತ್ತು ಪ್ರಾಣಾಯಾಮ ಮಾಡಿಸಲಾಯಿತು

