ವಿದ್ಯುತ್‌ ಕ್ಷೇತ್ರದ ಖಾಸಗೀಕರಣವನ್ನು ರದ್ದುಗೊಳಿಸುವಂತೆ  Federation of Karnataka Electricity Board Employees Union ನ  ಪ್ರತಿನಿಧಿಗಳುವಿಧಾನಪರಿಷತ್‌ ಶಾಸಕಐವನ್‌ ಡಿʼಸೋಜಾರವರಿಗೆ ಮನವಿ

0
3

ಟಾಟಾ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯು ಮೆಸ್ಕಾಂ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗು ಶಿವಮೊಗ್ಗ ಜಿಲ್ಲೆಗಳ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರ ಸಭೆ, ಉಡುಪಿ ನಗರಸಭೆ, ಶಿವಮೊಗ್ಗ ಮಹಾನಗರ ಪಾಲಿಕೆ ಯಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗಾಗಿ ಅರ್ಜಿಯನ್ನು ಸಲ್ಲಿಸಿರುತ್ತದೆ.

 ಸಂಸ್ಥೆಯ ಮುಖ್ಯ ಉದ್ದೇಶ ನಗರ ಕೇಂದ್ರೀಕೃತವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅರ್ಜಿ ಸಲ್ಲಿಸುವುದು. ವಿದ್ಯುತ್ ಶಕ್ತಿ ಕಾಯ್ದೆ 2003ರ ಪ್ರಕಾರ ವಿತರಣಾ ಪರವಾನಿಗೆ ಗಾರರು ತನ್ನ ಸ್ವಂತ ವಿದ್ಯುತ್ ಜಾಲವನ್ನು ಬಳಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗುತ್ತದೆ ಆದರೆ ಸದರಿ ಅರ್ಜಿದಾರರು ಮೆಸ್ಕಾಂ ಜಾಲವನ್ನು ಬಳಸಿ ವಿದ್ಯುತ್ ಹಂಚಿಕೆ ಮಾಡುವುದಾಗಿ ತಮ್ಮ ಅರ್ಜಿಯಲ್ಲಿ ತಿಳಿಸಿರುತ್ತಾನೆ. ಮೆಸ್ಕಾಂ ಸಂಸ್ಥೆಯು ಸಂಪೂರ್ಣವಾಗಿ ಸರಕಾರ ಸಾಮ್ಯಕ್ಕೆ ಒಳಪಟ್ಟಿದ್ದು ವಿದ್ಯುತ್ ಜಾಲಗಳನ್ನು ಕಳೆದ ನೂರು ವರ್ಷಗಳಿಂದ ಹೆಚ್ಚಿನ ಅವಧಿಯಲ್ಲಿ ನಾಗರಿಕರ ತೆರಿಗೆ ಹಣ ಮತ್ತು ವಿದ್ಯುತ್ ಬಿಲ್ಲಿನ ಕೊಡುಗೆಗಳ ಮೂಲಕ ರಚಿಸಲಾಗಿರುತ್ತದೆ ಸರಕಾರದ ಕೊಟ್ಟ ಅನುದಾನಗಳಿಂದ ಮೆಸ್ಕಾಂ ಮೂಲೆ ಮೂಲೆಯಲ್ಲಿ ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದ್ದು,  ಖಾಸಗಿ ಬಂಡವಾಳ ಶಾಹಿಗಳಿಗೆ ಇದರ ಉಪಯೋಗ ಅವಕಾಶ ಮಾಡಿಕೊಡುವುದು ಇದಕ್ಕಾಗಿ ರಕ್ತ ಬೆವರು ಸುರಿಸಿ ತೆರಿಗೆ ಕಟ್ಟಿದ ನಮ್ಮ ಪೂರ್ವಜರಿಗೆ ತೋರುವ ಅಗೌರವವಾಗುತ್ತದೆ. ವಿದ್ಯುತ್ ಸರಬರಾಜು ಮಾಡುವಲ್ಲಿ ದೇಶಾದ್ಯಂತ ಸ್ವಲ್ಪ ಮಟ್ಟಿಗೆ ಸಫಲವಾಗಿದ್ದರು ಗ್ರಾಮಾಂತರ ಪ್ರದೇಶಗಳ ಬಡವರ ಮಧ್ಯಮ ವರ್ಗದ ರೈತರ ವಿಷಯದಲ್ಲಿ ವಿದ್ಯುತ್ ಸ್ವಲ್ಪ ನೀಡುವಲ್ಲಿ ಖಾಸಗಿ ಸಂಸ್ಥೆ ವಿಫಲವಾಗಿದೆ ಆದುದರಿಂದ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಾಗುವುದನ್ನು ನಿಲ್ಲಿಸಬೇಕು ಹಾಗೂ ಖಾಸಗೀಕರಣಗೊಳಿಸಲು ನೀಡಿದ ಅರ್ಜಿಯನ್ನು ರದ್ದುಗೊಳಿಸಬೇಕು ಎಂದು Federation of Karnataka Electricity Board Employees Union ನ ಪ್ರತಿನಿಧಿಗಳು ಇಂದು ವಿಧಾನ ಪರಿಷತ್‌ ಶಾಸಕರಾದ       ಶ್ರೀ ಐವನ್‌ ಡಿʼಸೋಜಾರವರಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಕಂಪನಿಲೋಹಿತ್ ಬಿ.ಎಸ್ (ಕೆ.ಇ.ಬಿ.ಇ.ಎ ಸಂಘದ ಸಂಘಟನ ಕಾರ್ಯದರ್ಶಿ) ಅಭಿಷೇಕ್.ಸ.ಕಾ.ನಿ (ಇಂಜಿನಿಯರು ಸಂಘದ ಕಾರ್ಯದರ್ಶಿ) ಶ್ರೀನಿವಾಸಪ್ಪ (ಕಲ್ಯಾಣ ಸಂಸ್ಥೆಯ ಉಪಾದ್ಯಕ್ಷರು ) ವಸಂತ್ ಕುಮಾರ್ (ಸ.ಕಾ.ನಿ .ಇಂ) ಚಂದ್ರಶೇಖರ್ ಪೂಜಾರಿ (ಸ.ಕಾ.ನಿ.ಇಂ) ಷಣ್ಮುಖಪ್ಪ ಬಾವಿ 659, ನೌಕರರ ಸಂಘ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಕರಿಬಸಪ್ಪ, ರಾಜೇಶ್, ಗಿರೀಶ್  ಮತ್ತು ಇತರರಾದ ಕರೀಂ ಸಾಬ್, ಗಣೇಶ್ ,ಸದಾನಂದ, ಲೋಕೇಶ್, ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here