ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕ್ರೀಡಾಕೂಟ ಪೂರ್ವ ಸಿದ್ಧತಾ ಬೈಠಕ್

0
11

ಉಡುಪಿ : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಗೆ ಶೈಕ್ಷಣಿಕವಾಗಿ ಸಂಯೋಜನೆಗೊಂಡ ಸಂಸ್ಥೆಗಳ ನಡುವೆ ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟವು ಅತ್ಯಂತ ಯಶಸ್ವಿಗಾಗಿ ಸಾಗಲಿ . ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಸೂಕ್ತ ಅವಕಾಶ ವಿದ್ಯಾಭಾರತಿ ನೀಡುತ್ತಿದೆ . ಸಾಮರ್ಥ್ಯ ಇರುವಂತ ವಿದ್ಯಾರ್ಥಿಗಳು ರಾಷ್ಟ್ರಮಟ್ಟದವರೆಗೂ ಸ್ಪರ್ಧಿಸಿ ಸಂಸ್ಥೆಗೆ ಹೆಸರನ್ನು ತರುವಂತಾಗಲಿ ಎಂದು ಪಾಂಡುರಂಗ ಪೈ ಸಿದ್ಧಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ನುಡಿದರು.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಚೇರ್ಕಾಡಿಯಲ್ಲಿ ನಡೆದ ಕ್ರೀಡಾಕೂಟ ಪೂರ್ವ ಸಿದ್ಧತಾ ಬೈಠಕ್ ನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಸುರೇಶ ಹಜಮಾಡಿ ಸಂಸ್ಥೆಯ ಪ್ರಧಾನಾಚಾರ್ಯೆ ಪೂರ್ಣಿಮಾ ಎಸ್.ಡಿ ಉಪಸ್ಥಿತರಿದ್ದರು. ವಿದ್ಯಾಭಾರತಿ ಕರ್ನಾಟಕ ಜಿಲ್ಲೆ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾವಿಕ ನುಡಿ ನುಡಿದರು. ಚರಣ್ ರಾಜ್ ಕನ್ನಡ ಶಿಕ್ಷಕರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೇರ್ಕಾಡಿ ಸ್ವಾಗತಿಸಿ ವಂದಿಸಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯಕುಮಾರ್ ಶೆಟ್ಟಿ ಹೆಬ್ರಿ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಗುಂಪು ಆಟಗಳ ದಿನಾಂಕ ,ಸ್ಥಳ , ಆಟಗಳ ರೂಪುರೇಷೆವನ್ನು ತಿಳಿಸಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಿಂದ ಪ್ರಶಾಂತ, ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು , ಪ್ರವೀಣ್ ಹೆಗ್ಡೆ ಅಮೃತ ಭಾರತಿ ವಿದ್ಯಾಲಯ ಹೆಬ್ರಿ ,ನವೀನ್, ಆರ್.ಕೆ. ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿ, ಸಂತೋಷ ಖಾರ್ವಿ , ಆಡಳಿತ ಮಂಡಳಿಯ ಸದಸ್ಯರು ರಾಮಚಂದ್ರ ಆಚಾರ್ಯ ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ ಕುಮಾರಿ ಜ್ಯೋತಿ ಶ್ರೀ ಜನಾರ್ದನ ಶಾಲೆ ಎಳ್ಳಾರೆ , ಜಿತೇಂದ್ರ ಮುಖ್ಯೋಪಾಧ್ಯಾಯರು
ಶ್ರೀ ರಾಮ ವಿದ್ಯಾಕೇಂದ್ರ ಕೋಡಿ , ಕುಮಾರ್ ಡ್ಯುಯಲ್ ಸ್ಟಾರ್‌ ಶಾಲೆ ಅಮಾಸೆಬೈಲು,ನಿಶಾನ ಶೆಟ್ಟಿ ಅಮೃತ ಭಾರತಿ ವಿದ್ಯಾಲಯ ಹೆಬ್ರಿ . ರವೀಂದ್ರ ಎಂ. ಶೆಟ್ಟಿ, ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ , ಚರಣ್ ರಾಜ್ , ಮೊನಿಷಾ ಅಮಿನ್ , ರಜತ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೇರ್ಕಾಡಿ , ಕೇತನ್ .ಎಸ್ ,ಯು.ಎಸ್.ನಾಯಕ್ ಪ್ರೌಢಶಾಲೆ ಪಟ್ಲ ಬೈಠಕ್ ನಲ್ಲಿ ಉಪಸ್ಥಿತರಿದ್ದರು. ವಿವಿಧ ಶಾಲೆಗಳಿಂದ 20 ಶಿಕ್ಷಕರು ಹಾಜರಿದ್ದರು.

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಜುಲೈ 18 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೇರ್ಕಾಡಿ , ಜುಲೈ 21 ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು , ಗುಂಪು ಆಟಗಳು ಆಗಸ್ಟ್ 22 ಯು.ಎಸ್.ನಾಯಕ್ ಪ್ರೌಢಶಾಲೆ ಪಟ್ಲದಲ್ಲಿ ನಡೆಯುವವು ಎಂದು ಬೈಠಕ್ ನಲ್ಲಿ ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here