ಜ್ಞಾನವಿಕಾಸ ಯೋಜನೆಯಡಿ ಮಾದಕ ವಸ್ತು ನಿಷೇಧ ಮಸಾಚರಣೆ

0
48

ಮೂಡುಬಿದಿರೆ : ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಧರ್ಮಸ್ಥಳ ಜ್ಞಾನವಿಕಾಸ ಯೋಜನೆಯ ಆಶ್ರಯದಲ್ಲಿ ಜೂನ್ 23ರಂದು ಪ್ರಾಥಮಿಕ ಶಾಲಾ ಬಳಿಯ ಸಮುದಾಯ ಭವನದಲ್ಲಿ ನಡೆಯಿತು. ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಗ್ರಾಹಕ ವೇದಿಕೆಯ ಸಂಪನ್ಮೂಲ ವ್ಯಕ್ತಿ, ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರರು ಮಾಹಿತಿದಾರರಾಗಿ ಆಗಮಿಸಿದ್ದರು.

ಅವರು ತಮ್ಮ ಭಾಷಣದಲ್ಲಿ ಮಾದಕ ವಸ್ತು ಬಳಕೆಯಿಂದಾಗುವ ಅನಾನುಕೂಲತೆ, ಅದರಿಂದ ಕುಟುಂಬದ ವ್ಯವಸ್ಥೆಯ ಮೇಲಾಗುವ ಪರಿಣಾಮಗಳು, ಆರೋಗ್ಯಕ್ಕೆ ಅತ್ಯಂತ ಹಾನಿಕರವಾದ ಗುಟ್ಕಾ, ಮಾದಕ ಪೇಯಗಳು, ಮಾದಕ ವಸ್ತುಗಳ ಪರಿಣಾಮಗಳನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿಸಿ, ಪ್ರೀತಿ, ವಿಶ್ವಾಸ, ನಂಬಿಕೆಗಳು ಉತ್ತಮ ಕುಟುಂಬಕ್ಕೆ ಹೇಗೆ ಅವಶ್ಯಕ ಎನ್ನುವುದನ್ನು ಮನದಟ್ಟು ಮಾಡಿಸಿದರು.

ಜ್ಞಾನ ವಿಕಾಸ ಯೋಜನೆಯ ಸದಸ್ಯರುಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಜ್ಞಾನವಿಕಾಸ ಸಮನ್ವಯಾ ಧಿಕಾರಿ ವಿನುತಾ ಶೆಟ್ಟಿ ಕಾರ್ಯಕ್ರಮದ ಅಗತ್ಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಲೀಲಾ ಸ್ವಾಗತಿಸಿದರು. ಛಾಯಾ ವರದಿ ಮಂಡಿಸಿದರು. ಸೇವಾ ಪ್ರತಿನಿಧಿ ಮಾಲತಿ ಕಾರ್ಯಕ್ರಮ ಸಂಘಟಿಸಿದ್ದರು. ಜಯಂತಿ ವಂದಿಸಿದರು.
.

LEAVE A REPLY

Please enter your comment!
Please enter your name here