ಮೂಡುಬಿದಿರೆಯಲ್ಲಿ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿ ಉದ್ಘಾಟನೆ

0
25

ಮೂಡುಬಿದಿರೆ : ದಿನಾಂಕ 23-06-2026 ರಂದು ಯುವವಾಹಿನಿ (ರಿ.) ಮೂಡಬಿದರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್, ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡಬಿದರೆ ಇವರ ಜಂಟಿ ಆಶ್ರಯದಲ್ಲಿ 5 ದಿನಗಳ ಸೀರೆ ಕುಚ್ಚು ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮೂಡಬಿದರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು.

ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕರಾದ ಶಂಕರ್ ಕೋಟ್ಯಾನ್ ತರಬೇತಿ ಉದ್ಘಾಟಿಸಿ “ಹೊಲಿಗೆ ಕಲಿತ ಮಹಿಳೆಯರಿಗೆ ಸೀರೆ ಗೊಂಡೆ ಹಾಕುವ ಕೌಶಲ್ಯ ಕಲಿತು ಸ್ವ ಉದ್ಯೋಗ ಮಾಡಿದರೆ ಮಹಿಳೆಯರು ಹೆಚ್ಚು ಆರ್ಥಿಕವಾಗಿ ಸಬಲರಾಗಿ ತನ್ನ ಸಂಸಾರದ ಖರ್ಚು ವೆಚ್ಚ ಸರಿದೂಗಿಸಲು ಸಹಾಯವಾಗುತ್ತದೆ” ಎಂದರು.

ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ತಾಪಕಾರದ ಜೀವನ್ ಕೊಲ್ಯ ಮಾತಾಡುತ ತರಬೇತಿ ನಿಯಮಗಳ ಬಗ್ಗೆ ವಿವರಿಸಿ,ಕೌಶಲ್ಯ ತರಬೇತಿ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಶಕ್ತಿ ನೀಡುತ್ತದೆ, ಮಹಿಳೆಯರು ಸ್ವ ಉದ್ಯೋಗದ ಅವಕಾಶ ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ ತರಬೇತಿಯಲ್ಲಿ ಭಾಗವಹಿಸಿದವರಿಗೆ ಶುಭಾಶಯ ನೀಡಿದರು.

ವೇದಿಕೆಯಲ್ಲಿ ಯುವವಾಹಿನಿ (ರಿ.) ಮೂಡಬಿದರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್, ಸಂಪನ್ಮೂಲ ವ್ಯಕ್ತಿ ಶುಭಲಕ್ಷ್ಮೀ , ಘಟಕದ ಸಂಘಟನಾ ಕಾರ್ಯದರ್ಶಿ ಪ್ರಸಾದ್, ಅಮೂಲ್ಯ ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ಲತೇಶ್.B ಉಪಸ್ಥಿತರಿದ್ದರು. ವೀಚೀಶ್ ಕೌಶಲ್ಯ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಜೆನಿಫರ್ ನಿರೂಪಣೆ ಮಾಡಿ, ಸುಮಲತಾ ಸ್ವಾಗತಿಸಿ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಧನ್ಯವಾದಗೈದರು. ಮೂಡಬಿದರೆ ವ್ಯಾಪ್ತಿಯ 35 ಮಹಿಳೆಯರು 5 ದಿನದ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here