ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ವತಿಯಿಂದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026” ಅನ್ನು ಆಯೋಜಿಸಲಾಗಿದೆ.
“ವೈದ್ಯಲೋಕ” ಆರೋಗ್ಯ ಮಾಸ ಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳು ಈ ಸ್ಪರ್ಧೆಗೆ ಸಹಯೋಗ ನೀಡುತ್ತಿವೆ.
ಸ್ಪರ್ಧೆಯ ಉದ್ದೇಶ :
ಬರವಣಿಗೆಯ ಮೂಲಕ ಆರೋಗ್ಯ ಮತ್ತು ಸ್ವಾಸ್ಥ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಧ್ವನಿಯಾಗುವುದು. ನಿಮ್ಮ ಪದಗಳು ಆರೋಗ್ಯಕರ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂಬುದು ಪರಿಷತ್ತಿನ ಆಶಯ.
3 ವಿಭಾಗಗಳಲ್ಲಿ ಸ್ಪರ್ಧೆ:
ಸಾರ್ವಜನಿಕರು
ವೈದ್ಯರು ಮತ್ತು ಆರೋಗ್ಯ ವೃತ್ತಿಪರರು
ವೈದ್ಯಕೀಯ ವಿದ್ಯಾರ್ಥಿಗಳು
ಏಕೆ ಭಾಗವಹಿಸಬೇಕು?
ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಸುವರ್ಣ ಅವಕಾಶ
ಸಾಹಿತ್ಯದ ಮೂಲಕ ಆರೋಗ್ಯ ಜಾಗೃತಿ ಹರಡಲು ವೇದಿಕೆ
ಆಯ್ದ ಬರಹಗಳು ‘ವೈದ್ಯಲೋಕ’ ಮಾಸಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟ
ಆರೋಗ್ಯ ವಿಷಯ ಲೇಖಕರಾಗಿ ಗುರುತಿಸಿಕೊಳ್ಳುವ ಅವಕಾಶ
ವಿಜೇತರಿಗೆ ಪ್ರಶಸ್ತಿ, ಬಹುಮಾನ ಮತ್ತು ಪ್ರಮಾಣಪತ್ರ
ಪ್ರಮುಖ ದಿನಾಂಕ : ಕಥೆ ಮತ್ತು ಕವನ ಕಳುಹಿಸಲು ಕೊನೆಯ ದಿನಾಂಕ: ಜೂನ್ 30, 2026
ಬರಹಗಳನ್ನು ಕಳುಹಿಸಬೇಕಾದ ವಿಳಾಸ:
ಇಮೇಲ್: mediaicon@ymail.com
ವಾಟ್ಸಪ್: 81975 54373
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಕೃಷ್ಣ ಎಂ: 81975 54373
ಎನ್.ವಿ. ರಮೇಶ್: 98455 65238

