ಮಾನವನಿಗೆ ಉತ್ತಮ ಆರೋಗ್ಯ ಬಲು ಅವಶ್ಯ : ಡಾ. ಸತ್ಯನಾರಾಯಣ ಭಟ್

0
33

ಕಾರ್ಕಳ : ಮಾನವನಿಗೆಉತ್ತಮ ಆರೋಗ್ಯ ಬಲು ಅವಶ್ಯ ನಮ್ಮ ಪ್ರಾಚೀನ ಆಹಾರ ಪದ್ಧತಿ, ಮಿತ ಆಹಾರ,ವ್ಯಾಯಾಮ, ಯೋಗ,ಸತ್ಚಿಂತನೆ,ಗಳನ್ನು ಮೈಗೂಡಿಕೊಂಡರೆ ವೃದ್ಧಾಪ್ಯದಲ್ಲಿ ಉತ್ತಮ ಆರೋಗ್ಯದಿಂದ ಬಾಳಬಹುದು ಎಂದು ಖ್ಯಾತ ವೈದ್ಯ, ಪರಿಸರತಜ್ಞ ಡಾ. ಸತ್ಯನಾರಾಯಣ ಭಟ್ ರವರುಕರೇ ನೀಡಿದರು.

ಇವರು ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ವಕೀಲರಾದ ವಿಜೇಂದ್ರ ಕುಮಾರ್ ರವರು ಮಾತನಾಡಿ ಪ್ರತಿಯೊಬ್ಬರು ಕಾನೂನು ಅರಿವು ಹೊಂದಿರಬೇಕು.

ಇದರಿಂದ ಆಸ್ತಿ ಖರೀದಿ,ಮಾರಾಟ, ವಿಲ್ ಬರೆಯುವ ಸಂದರ್ಭದಲ್ಲಿ ಅನಗತ್ಯ ವಿವಾದಗಳಿಂದ ರಕ್ಷಣೆ ಪಡೆಯಬಹುದು ಎಂದು ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಕಮಲಾಕ್ಷ kamath ವಹಿಸಿದ್ದು ಸರ್ವರನ್ನು ಸ್ವಾಗತಿಸಿದರು.ಜಯರಾಮ ಕಾಮತ್ ಪ್ರಾರ್ಥಿಸಿದರು.

ಪ್ರದೀಪ್ ನಾಯಕ ಮತ್ತು ಕೇಶವ ನಂಬಿಯಾರ್ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯದರ್ಶಿ ಜಗದೀಶ ಗೋಖಲೆ ವಂದನಾರ್ಪಣೆ ಗೈದು ಕಾರ್ಯಕ್ರಮದ ನಿರ್ವಹಣೆಯನ್ನು ಶೈಲಜಾ ಹೆಗಡೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here