ಮುಖ್ಯ ಶಿಕ್ಷಕಿಯಾಗಿ ಪದೊನ್ನೋತಿ ಗೊಂಡ ಶಿಕ್ಷಕಿ ಚೇತನಾ ಕುಮಾರಿ ಯವರ ಬಿಳ್ಕೊಡುಗೆ ಸಮಾರಂಭ

0
11

ಒಂದು ಶಾಲೆಯ ಏಳಿಗೆ ಅಲ್ಲಿಯ ಶಿಕ್ಷಕರ ಹವ್ಯಾಸ ಮತ್ತು ಕಾರ್ಯತತ್ಪರತೆಯನ್ನು ಅವಲಂಬಿಸಿದೆ : ದಿವಾಕರ ಶೆಟ್ಟಿ

ಕಲ್ಲಡ್ಕ : ಒಂದು ಶಾಲೆಯ ಏಳಿಗೆ ಅಲ್ಲಿಯ ಶಿಕ್ಷಕರ ಹವ್ಯಾಸ ಮತ್ತು ಕಾರ್ಯತತ್ಪರತೆಯನ್ನು ಅವಲಂಬಿಸಿದೆ, ಶಿಕ್ಷಕರು ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಏಳಿಗೆಗೆ ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಿದಾಗ ಅದರ ಫಲ ಉತ್ತಮವಾಗಿರುತ್ತದೆ.ಎಂದು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಅಧ್ಯಕ್ಷರಾದ ದಿವಾಕರ ಶೆಟ್ಟಿ ಹೇಳಿದರು.

ಅವರು ಜೂನ್ 27 ಶನಿವಾರ ಬಾಳ್ತಿಲ ಗ್ರಾಮದ ಕಂಟಿಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆತ ಶಿಕ್ಷಕಿ ಚೇತನಾ ಕುಮಾರಿ ಯವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತಾಡಿದರು.

ಪೋಷಕರ ಜೊತೆಗಿನ ಶಿಕ್ಷಕರ ಒಡನಾಟವು ಶಾಲೆಯ ಬೆಳವಣಿಗೆಯ ಮುಖ್ಯ ಭಾಗವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯನ್ನು ಒದಗಿಸುವುದರ ಮೂಲಕ ಉತ್ತಮ ಹವ್ಯಾಸ ಬೆಳೆಯುವಲ್ಲಿ ಕಾರಣರಾಗುತ್ತಾರೆ ಎಂದು ಯಕ್ಷಗಾನ ಗುರು ಅಲೆತ್ತೂರು ನರಸಿಂಹ ಮಯ್ಯ ಹೇಳಿದರು.

ಒಬ್ಬ ಶಿಕ್ಷಕಿ ತನ್ನ ಸೇವಾ ಅವಧಿಯಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಯಾವೆಲ್ಲ ರೀತಿಯಲ್ಲಿ ಕತ೯ವ್ಯ ನಿವ೯ಹಿಸಲು ಸಾಧ್ಯ ಎಂಬುದನ್ನು ಶಾಲೆಯಿಂದ ಮುಖ್ಯ ಶಿಕ್ಷಕಿಯಾಗಿ ಪಾಟ್ರೆಕೋಡಿ ಶಾಲೆಗೆ ಪದೊನ್ನೋತಿ ಹೊಂದಿ ಸೇವೆಗೆ ತೆರಳುತ್ತಿರುವ ಚೇತನಾ ಕುಮಾರಿ ಸಾಧಿಸಿ ತೋರಿಸಿದ್ದಾರೆ ಎಂದು ರಾಜ್ಯಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಿವೃತ್ತ ಶಿಕ್ಷಕ ಸಂಜೀವ ರೈ ವಹಿಸಿದ್ದರು. ಶಾಲೆಯಿಂದ ಬೀಳ್ಕೊಡುತ್ತಿರುವ ಶಿಕ್ಷಕಿ ಚೇತನಾ ಕುಮಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಟಿಫಿನ್ ಬಾಕ್ಸ್ ವಿತರಿಸಿದರು. ಹಾಗೂ ತನ್ನ ಅವಧಿಯಲ್ಲಿ ಸಹಕರಿಸಿದ ಮಹಾನಿಯರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿಯ ನಿಕಟ ಪೂರ್ವ ಅಧ್ಯಕ್ಷ ಶೇಸಪ್ಪ ಮೂಲ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸೌಮ್ಯಶ್ರೀ, ಉಪಾಧ್ಯಕ್ಷರಾದ ಮಾಧವ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗಣೇಶ್ ನೆಟ್ಲ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ವಿವೇಕ ಜಾಗೃತ ಬಳಗ ನರಿಕೊಂಬುವಿನ ಸದಸ್ಯರಾದ ರೋಹಿದಾಸ್, ಮಧುಸೂದನ್, ಗೋಪಾಲ್ ಕಲ್ಲಡ್ಕ, ಪಂಚಾಯತ್ ಮಾಜಿ ಸದಸ್ಯರುಗಳಾದ ಆನಂದ ಶೆಟ್ಟಿ, ರಾಜೀವ,ನಿಕಟಪೂರ್ವ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್, ಸ್ಥಳೀಯರಾದ ಜನಾರ್ಧನ್, ಚಂದನ್ ಕಾಂಪ್ರಬಯಲು, ಅಡುಗೆ ಸಿಬ್ಬಂದಿ ಭವಾನಿ ಅಂಗನವಾಡಿ ಶಿಕ್ಷಕಿ ತನುಜ, ಮೊದಲಾದವರು ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಶಾಲಾ ಮಕ್ಕಳು, ಹಿರಿಯ ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಶಾಲಾ ಪ್ರಭಾರ ಮಖ್ಯಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಗೌರವ ಶಿಕ್ಷಕಿ ಮೋನಿಷಾ ವಂದಿಸಿದರು. ಅತಿಥಿ ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here