ಸಜೀಪ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಭತ್ತದ ನಾಟಿ: ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ

0
40

ಬಂಟ್ವಾಳ : ಶ್ರೀ ಬಾಲ ಗಣಪತಿ ದೇವಸ್ಥಾನ, ಅನ್ನಪಾಡಿ–ಸಜೀಪ ಮೂಡ ವತಿಯಿಂದ ಶ್ರೀ ಕ್ಷೇತ್ರದ ಗದ್ದೆಯಲ್ಲಿ ಈ ವರ್ಷದ ಭತ್ತದ ಕೃಷಿಗೆ ಭಾನುವಾರ ಸಾಮೂಹಿಕವಾಗಿ ಚಾಲನೆ ನೀಡಲಾಯಿತು. ವಿನಾಯಕ ಚತುರ್ಥಿಯಂದು ಭಕ್ತರಿಗೆ ಪೂರ್ವಶಿಷ್ಟ ಸಂಪ್ರದಾಯದಂತೆ ಮನೆ ತುಂಬಿಸಲು ತೆನೆ ವಿತರಿಸಲು ಅನುಕೂಲವಾಗುವ ಉದ್ದೇಶದಿಂದ ಈ ಭತ್ತದ ಬೇಸಾಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಮಾಜಿ ಶಾಸಕ ಕೆ. ರುಕ್ಮಯ್ಯ ಪೂಜಾರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ರವೀಂದ್ರ ಕಂಬಳಿ, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಂಟ್ವಾಳ ಬಿಜೆಪಿ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಪ್ರಭಾಕರ ಶೆಟ್ಟಿ, ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಕೃಷ್ಣಶಾಂ, ಶಂಕರ (ಕೋಚ) ಪೂಜಾರಿ, ಪ್ರದೀಪ್ ಶೆಟ್ಟಿ ಬಿಜಂತಾಡಿಗುತ್ತು, ಪ್ರೇಮ ಜಿ. ಶೆಟ್ಟಿ, ಚಿನ್ನಯ್ಯ ಸಾಲಿಯಾನ್, ಲಯನ್ ಸುಧಾಕರ ಆಚಾರ್ಯ, ಸಂಜೀವ ಪೂಜಾರಿ (ಗುರುಮಂದಿರ), ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಮಾಜಿ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವುದರ ಜೊತೆಗೆ ಪೌಷ್ಟಿಕಾಂಶಯುಕ್ತ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಉತ್ಪಾದನೆಗೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು ಮಾತನಾಡಿ, ದೇವಸ್ಥಾನದ ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರು ಮತ್ತು ಗ್ರಾಮಸ್ಥರು ಎಂದಿನಂತೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗಣೇಶ್ ಚೇಳೂರು, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬೋಳಿಯಾರು ಅಧ್ಯಕ್ಷರು, ರಮೇಶ್ ಅನ್ನಪಾಡಿ, ದೇವದಾಸ್ ಅನ್ನಪಾಡಿ, ಸುರೇಶ್ ಪೂಜಾರಿ, ಸುರೇಶ್ ಬಂಗೇರ, ಲಿಂಗಪ್ಪ ದೋಟ, ಪ್ರಶಾಂತ್ ಪೂಜಾರಿ, ಪ್ರಮೋದ್ ಸಾನದಮನೆ ಹಾಗೂ ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here