ಮಂಗಳೂರು : ಸಮಾಜಮುಖಿ ಚಿಂತನೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಮಣ್ಯ ಕೊರ್ಯಾರ್ ಅಭಿಪ್ರಾಯ ಪಟ್ಟರು ಅವರು ಕಾವೂರು ದ ಕ ಜಿ ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ನೂರು ಮಕ್ಕಳಿಗೆ ಭರತಾಂಜಲಿ ನೃತ್ಯ ಸಂಸ್ಥೆಯು ಕೊಡಮಾಡಲ್ಪಟ್ಟ ಸ್ಟೀಲ್ ಊಟದ ತಟ್ಟೆಯನ್ನು ವಿತರಿಸುವ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು ಮಕ್ಕಳ ಮನಸ್ಸು ಕನ್ನಡಿಯಂತೆ ಸ್ವಚ್ಛವಾಗಿರುತ್ತದೆ ಅವರು ಯಾವುದೇ ಭೇದ ಭಾವ ಇಲ್ಲದೆ ಪ್ರತಿಯೊಬ್ಬರನ್ನು ಪ್ರೀತಿಸುತ್ತಾರೆ ಇಂತಹ ಶುದ್ಧವಾದ ಪ್ರೀತಿಯಲ್ಲಿಯೇ ದೇವರ ಅಂಶವಿರುತ್ತದೆ ಆದ್ದರಿಂದ ಭರತಾಂಜಲಿ ಸಂಸ್ಥೆಯು ನೀಡುತ್ತಿರುವ ಈ ಕೊಡುಗೆ ಒಂದು ದೊಡ್ಡ ದೇವತಾ ಕಾರ್ಯ ಕಲಾ ಜೀವನದಲ್ಲಿ ಇಂತಹ ಸತ್ ಚಿಂತನೆಗಳನ್ನು ಹೊಂದಿರುವ ಶ್ರೀಧರ ಹೊಳ್ಳ ಪ್ರತಿಮಾ ದಂಪತಿಗಳು ಅಭಿನಂದನಾರ್ಹರು ಎಂದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳರು ಈ ಶಾಲೆಗೂ ನಮ್ಮ ಭರತಾಂಜಲಿಗೂ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿ ಈ ಶಾಲೆ ಸರಕಾರಿ ಶಾಲೆಗಳಲ್ಲೇ ಒಂದು ಮಾದರಿಯಾಗಿದ್ದು ಇಲ್ಲಿನ ಶಿಕ್ಷಕಿಯರು ಅರ್ಪಣಾ ಮನೋಭಾವದಿಂದ ಕರ್ತವ್ಯ ಮಾಡುತ್ತಿರುವುದರಿಂದಲೇ ಇಂದು ಈ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಳವಾಗಿ ಸುಮಾರು 250 ದಾಟಿರುವುದು ಸಂತೋಷವೇ ಸರಿ ಎಂದರು.
ಭರತಾಂಜಲಿಯ ನಿರ್ದೇಶಕಿ ಪ್ರತಿಮಾ ಶ್ರೀಧರ್ ಮಾತನಾಡುತ್ತಾ ಮಕ್ಕಳು ಸಮಾಜದ ಅತ್ಯಮೂಲ್ಯ ಸಂಪತ್ತು ಮತ್ತು ಭವಿಷ್ಯದ ಆಧಾರ ಸ್ಥಂಭ ಅವರ ಆರೋಗ್ಯಕರ ಬೆಳವಣಿಗೆ ಉತ್ತಮವಾಗಿರಬೇಕು ಮಕ್ಕಳು ಮುಂದೆ ಕಲಿತು ದೊಡ್ಡವರಾಗಿ ಸ್ವಂತ ಕಾಲಿನಲ್ಲಿ ನಿಂತುಕೊಂಡು ಮನೆಗೂ ಸಮಾಜಕ್ಕೂ ಆಸ್ತಿಯಾಗಿ ಇಂತಹ ಸರಕಾರಿ ಶಾಲೆಗಳಿಗೆ ನೆರವು ನೀಡುವಂತಾಗಬೇಕು ಎಂದು ಕಿವಿಮಾತು ಹೇಳಿದರು ಶಾಲಾ ಮುಖ್ಯೋಪಾಧ್ಯಾಯನಿ ಜಯಂತಿ ಸ್ವಾಗತಿಸಿ ಹಿರಿಯ ಶಿಕ್ಷಕಿ ಕೋಕಿಲ ನಿರೋಪಿಸಿ, ಸುನಿತಾ ವಂದಿಸಿದರು. ಭರತಾಂಜಲಿಯ ನೃತ್ಯ ಶಿಕ್ಷಕಿ ಪ್ರಕ್ಷಿಲ ಜೈನ್ ಶಿಕ್ಷಕಿಯರಾದ ಆಶಾ, ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.

