ಹಾಸನ : ಚುಟುಕು ಸಾಹಿತ್ಯ ಕಂಪನ್ನು ಪಸರಿಸುವ ಚೊಚ್ಚಲ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಕಲೆ, ಸಂಸ್ಕೃತಿಯ ತವರು ಹಾಸನದಲ್ಲಿ ನೆರವೇರಿತು. ಅರ್ಥಪೂರ್ಣವಾಗಿ ಮಳೆಯ ಸಿಂಚನದ ನಡುವೆ ಸಾಹಿತ್ಯಾಭಿಮಾನಿಗಳ ಕಲರವದ ನಡುವೆ ಸಮ್ಮೇಳನಾಧ್ಯಕ್ಷೆ ಡಾ.ರತ್ನಹಾಲಪ್ಪ ಗೌಡರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ರಾಜ್ಯ, ಹೊರರಾಜ್ಯದಿಂದ ಆಗಮಿಸಿದ್ದ ನೂರಾರು ಸಾಹಿತ್ಯ ಮನಸ್ಸುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಹೇಮಾವತಿ ಪ್ರತಿಮೆ ಬಳಿಯಿಂದ ಎವಿಕೆ ಕಾಲೇಜು ಸಭಾಂಗಣದವರೆಗೂ ಮೆರವಣಿಗೆ ಸಾಗಿತು.
ಚುಟುಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಬಾ.ನಂ.ಲೋಕೇಶ್ ಹಾಗೂ ಸರ್ವ ಆಡಳಿತ ವೃಂದದವರಿಂದ ಆಯೋಜಿಸಲ್ಪಟ್ಟ ಬಹುಭಾಷ ಚುಟುಕು ಕವಿಗೋಷ್ಠಿಯಲ್ಲಿ ಪುಷ್ಪ ಪ್ರಸಾದ್ ರವರು ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಭಾಗದ ಕೆಲವು ಕಡೆ ಪ್ರಚಲಿತದಲ್ಲಿರುವ ಕುಂಬಾರ ಭಾಷೆಯ ಚುಟುಕುಗಳನ್ನು ವಾಚಿಸಿ ಎಲ್ಲರ ಘಮನ ಸೆಳೆದರು. ಇವರ ಈ ಕುಂಬಾರ ಭಾಷೆಯ ಚುಟುಕಿಗೆ ಚುಟುಕು ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

