ಪೆರ್ನೆ ವಲಯದ ಬಿಳಿಯೂರಿನಲ್ಲಿ ಡಿಜಿ ಪೇ ಕಾರ್ಯಕ್ರಮ ಉದ್ಘಾಟನೆ

0
31

ವಿಟ್ಲ : ವಿಟ್ಲ ತಾಲೂಕಿನ ಪೆರ್ನೆ ವಲಯದ ಬಿಳಿಯೂರು ಸಿ.ಎಸ್.ಸಿ (CSC) ಕೇಂದ್ರದಲ್ಲಿ ಡಿಜಿಟಲ್ ಸೇವೆಗಳ ಉತ್ತೇಜನದ ಉದ್ದೇಶದಿಂದ ಡಿಜಿ ಪೇ (DigiPay) ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕರ್ವೇಲು ಒಕ್ಕೂಟದ ಅಧ್ಯಕ್ಷ ಮಹೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಆನ್‌ಲೈನ್ ಸೇವೆಗಳ ಬಳಕೆಯನ್ನು ಹೆಚ್ಚಿಸುವಲ್ಲಿ ಸಿ.ಎಸ್.ಸಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ತಣಿಯಪ್ಪ, ಒಕ್ಕೂಟದ ಉಪಾಧ್ಯಕ್ಷೆ ಲಲಿತ, ವಲಯದ ಮೇಲ್ವಿಚಾರಕ ಲತೇಶ್, CFS ಪ್ರವೀಣ್, ಪ್ರತಿನಿಧಿ ರೇಷ್ಮಾ, VLE ಅನಿತಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here