ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನ ಸಮೂಹ ಸಂಸ್ಥೆಗಳ ಸಂಯುಕ್ತ ಆಯೋಜನೆಯಲ್ಲಿ ಇದೇ ಜುಲೈ 26ರಂದು ನಡೆಯಲಿರುವ “ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ” ಯಶಸ್ವಿಗೊಳಿಸಲು ಸಮ್ಮೇಳನ ಸಮಿತಿಯ ಸಮಾಲೋಚನಾ ಸಭೆ 8-7-2026ರಂದು ಕನ್ನಡ ಭವನ ಕೇಂದ್ರ ಕಛೇರಿಯಲ್ಲಿ ನಡೆಯಿತು.
ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಯಶಸ್ವಿಗೆ ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು.
ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ. ಪಿ. ಸೋಮಶೇಖರ್ ಐ.ಎ.ಎಸ್. ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಕನ್ನಡ ಪ್ರಾಧಿಕಾರಗಳ, ಕರ್ನಾಟಕ ರಾಜ್ಯದಲ್ಲಿನ ವಿವಿಧ ಜಿಲ್ಲೆಗಳ ಕನ್ನಡ ಭವನ ಘಟಕಗಳ ಹಾಗೂ ವಿವಿಧ ಮುಂಚೂಣಿಯಲ್ಲಿರುವ ಸಂಘಟಕರುಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಕರ್ನಾಟಕದಿಂದ ಸುಮಾರು 50 ಸಂಸ್ಥೆಗಳ ಅಧ್ಯಕ್ಷರುಗಳು, ಸುಮಾರು 50 ಶ್ರೇಷ್ಠ ಸಾಹಿತಿ, ಕವಿ, ವಿದ್ವಾಂಸರುಗಳು. ಸುಮಾರು 10 ಕಲಾ ತಂಡಗಳು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡುವ ಕಾಯಕಗಳನ್ನು ಚರ್ಚಿಸಲಾಯಿತು.
26ರಂದು ನಡೆಯಲಿರುವ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಕನ್ನಡ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲು ತೀರ್ಮಾನಿಸಲಾಯಿತು. ನಗರದ ನಳ್ಳಿಪ್ಪಾಡಿ ಮುನಿಸಿಪಲ್ ಬಸ್ ನಿಲ್ದಾಣ ಪರಿಸರದಿಂದ ಬೆಳಿಗ್ಗೆ 9 ಗಂಟೆಗೆ ತೆರೆದ ವಾಹನ ಮೂಳಕ ವಿವಿಧ ಕಲಾ ಪ್ರದರ್ಶನಗಳ ವಿವಿಧ ವಾದ್ಯ ಘೋಷಗಳೊಂದಿಗೆ ಭಜನೆ, ಕುಣಿತ ಭಜನೆ, ಸಮೂಹ ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಸಮೂಹ ಜಾನಪದ ನೃತ್ಯ, ಸಮೂಹ ನೃತ್ಯ ರೂಪಕ, ಡೊಳ್ಳು ಕುಣಿತ, ತಮಟೆ ತಂಡ, ಮಂಡ್ಯ ಪೂಜಾ ಕುಣಿತ, ಪಟ ಕುಣಿತ, ಚೆಂಡೆ ಮೇಳದೊಂದಿಗೆ ಮೆರವಣಿಗೆ ವಿಶೇಷ ಮೆರುಗು ಮಾಡಿಸಲು ತೀರ್ಮಾನಿಸಲಾಯಿತು.
10 ಗಂಟೆಗೆ ಕನ್ನಡ ಭವನ ಸಭಾಂಗಣದಲ್ಲಿನ ದಿ. ಡಾ. ಲಲಿತಾ ಎಸ್. ಎನ್. ಭಟ್” ವೇದಿಕೆಯಲ್ಲಿ ನಡೆಯಲಿರುವ ಉದ್ಘಾಟನೆಗೆ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ವಿಶೇಷ ಗೌರವ ಮೆರವಣಿಗೆಯಲ್ಲಿ ಸ್ವೀಕರಿಸಲು ತೀರ್ಮಾನಿಸಲಾಯಿತು. ಕರ್ನಾಟಕದಿಂದ ಬರುವ ಅತಿಥಿ ಮಾನ್ಯರಿಗೆ ವಸತಿ ಸೌಕರ್ಯ, ಉಪಹಾರ, ಊಟೋಪಚಾರಕ್ಕೆ ಸಮಿತಿಗಳನ್ನು ರಚಿಸಲಾಯಿತು. ಅತಿಥಿ ಸತ್ಕಾರ ಸಮಿತಿ, ಪ್ರದೀಪ್ ಬೇಕಲ್.ಊಟೋಪಚಾರ ಮೋಹನ್ ದಾಸ್ ಕೊರಕ್ಕೋಡು, ನಗರ ಸಭಾ ಸದಸ್ಯೆ ದಿವ್ಯಾ ಸಂದೀಪ್, ಆಹಾರ ವಿತರಣಾ ಸಮಿತಿ ನವೀನ್ ನಾಯ್ಕ ಪಾಂಗೋಡು, ನಗರ ಸಭಾ ಸದಸ್ಯೆ ಶ್ರುತಿ ವಿಕಾಸ್, ಮೆರವಣಿಗೆ ಸಮಿತಿ ಮಾಜಿ ನಗರಸಭಾ ಸದಸ್ಯ ಶಂಕರ್ ಜೆ.ಪಿ. ನಗರ, ನೇತಾಜಿ ಅಸೋಸಿಯೇಷನ್ ಅಧ್ಯಕ್ಷ ಸುಬ್ಬಣ್ಣ ರೈ, ಗೌರವ ಅಧ್ಯಕ್ಷ ಶಶಿಕಾಂತ ಶೆಟ್ಟಿ, ನಗರ ಸಭಾ ಸದಸ್ಯ ಹರೀಶ್ ಕೆ.ಆರ್., ಜಯಾನಂದ ಕುಮಾರ್ ಹೊಸದುರ್ಗ, ಮಾಜಿ ನಗರ ಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಇವರಿಗೆ ವಹಿಸಲು ತೀರ್ಮಾನಿಸಲಾಯಿತು.
ವಿವಿಧ ಪ್ರಶಸ್ತಿ ಸಮಿತಿ ಸಂಚಾಲಕರಾಗಿ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಸಂಚಾರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರದೀಪ್ ನ್ಯಾಕ್, ಬ್ಯಾನರ್, ಪೋಸ್ಟರ್, ಪ್ರಚಾರ ಸಮಿತಿ ರಾಜೇಶ್ ಕೋಟೆಕಣಿ, ಮಾಧ್ಯಮ ಪ್ರಚಾರ ಜಗನ್ನಾಥ್ ಶೆಟ್ಟಿ, ಪ್ರದೀಪ್ ಬೇಕಲ್ ಇವರಿಗೆ ವಹಿಸಲಾಯಿತು. ಆಮಂತಣ ಪತ್ರಿಕೆ ವಿತರಣಾ ಸಮಿತಿ ಸಂಚಾಲಕರಾಗಿ ಪ್ರಶಾಂತ್ ಎಲ್.ಐ.ಸಿ. ಯವರಿಗೆ ವಹಿಸಲಾಯಿತು. ಆರ್ಥಿಕ ಸಮಿತಿ ಸಂಚಾಲಕರಾಗಿ ಸಂಧ್ಯಾರಾಣಿ ಟೀಚರ್ ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡ ಭವನ ಕೇಂದ್ರ ಸಮಿತಿ ಕಾರ್ಯದರ್ಶಿಯಾದ ವಸಂತ್ ಕೆರೆಮನೆಯವರಿಗೆ ವಹಿಸಲಾಯಿತು. ವಾಹನ ನಿಲುಗಡೆ ಸಂಚಾಲಕರಾಗಿ ಲೋಕೇಶ್ ಶೆಟ್ಟಿ ಮತ್ತು ತಂಡ ಕಾರ್ಯ ನಿರ್ವಹಿಸಲಿರುವರು.
ಸಮ್ಮೇಳನ ಸಮಿತಿ ಸಭೆಯಲ್ಲಿ ಪ್ರದೀಪ್ ಬೇಕಲ್, ನವೀನ್ ನಾಯ್ಕ ನಾಗರಕಟ್ಟೆ, ಲೋಕೇಶ್ ಶೆಟ್ಟಿ, ಶರತ್ ಅಣಂಗೂರು, ಜಗದೀಶ್ ಅಣಂಗೂರು, ಪ್ರಶಾಂತ್ ಎಲ್.ಐ.ಸಿ., ನಗರ ಸಭಾ ಸದಸ್ಯೆ ದಿವ್ಯಾ ಸಂದೀಪ್, ಕೌನ್ಸಿಲರ್ ಶ್ರುತಿ ವಿಕಾಸ್, ಜಯಂತ್ ಅಣಂಗೂರು, ಶಶಿಕಾಂತ್ ಶೆಟ್ಟಿ, ಸುಬ್ಬಣ್ಣ ರೈ, ದಿನೇಶ್ ಅಣಂಗೂರು ಸಲಹೆ ಸೂಚನೆಗಳನ್ನಿತ್ತು ಸಭೆ ಅರ್ಥಪೂರ್ಣಗೊಳಿಸಿದರು.
ಕನ್ನಡ ಭವನ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಸಂಧ್ಯಾರಾಣಿ ಟೀಚರ್ ಧನ್ಯವಾದವಿತ್ತರು. ಪದೀಪ್ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು.

