ಸುಳ್ಯದ ಯುವ ಗಾಯಕ ತನ್ಮಯ್ ಸೋಮಯಾಗಿ ಸಂಗೀತ ಲೋಕದ ಉದಯೋನ್ಮುಖ ತಾರೆ

0
10

ಸುಳ್ಯ : ಮಾಸ್ಟರ್ ತನ್ಮಯ್ ಸೋಮಯಾಗಿ ಸುಳ್ಯ ಇವರು ಸುಳ್ಯದ ವಿಕ್ರಮ್ , ರಂಜಿನಿ ದಂಪತಿಗಳ ಪುತ್ರ. ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಈ ಪುಟ್ಟ ಹುಡುಗನ ವಯಸ್ಸು ಕೇವಲ ಹದಿನಾರು . ಇಷ್ಟು ಸಣ್ಣ ವಯಸ್ಸಿನಲ್ಲೇ 200 ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಹಾಡಿದ ಇವರಿಗೆ 100 ಕ್ಕೂ ಹೆಚ್ಚು ಬಹುಮಾನಗಳು ಪ್ರಶಸ್ತಿಗಳು ದೊರೆತಿವೆ.

ಇವರು ತಮ್ಮ ಐದನೇ ವಯಸ್ಸಿನಿಂದ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದ್ದು ಪ್ರಸ್ತುತ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಬಳಿ ಸೀನಿಯರ್ ಶಾಸ್ತ್ರೀಯ ಸಂಗೀತ ಕಲಿಯುತಿದ್ದು, ಐದು ವರ್ಷಗಳ ಕಾಲ ಸುಗಮ ಸಂಗೀತ ಅಭ್ಯಾಸವನ್ನು ಡಾ. ಕಿರಣ್ ಕುಮಾರ್ ಗಾನಸಿರಿ ಇವರ ಬಳಿ ಕಲಿತಿರುತ್ತಾರೆ. ಮತ್ತು ಕೀಬೋರ್ಡ್ ವಾದನ ವನ್ನು ಡಾ ದಿನೇಶ್ ರಾವ್ ರವರ ಬಳಿ 5 ವರ್ಷಗಳ ಕಾಲ ಕಲಿತಿರುತ್ತಾರೆ.

ಇವರು ತುಳುನಾಡಿನ ಪ್ರಸಿದ್ಧ ಟಿವಿ ಚಾನೆಲ್ಗಳಾದ Daiji ವರ್ಲ್ಡ್, v4 news, news ಕರ್ನಾಟಕ ಚಾನೆಲ್, ಸುದ್ದಿ ವಾಹಿನಿ, ಕಹಳೆ, ಅಭಿಮತ, ನಮ್ಮ ಟಿವಿ, ರೇಡಿಯೋ fm ಮುಂತಾದ ಚಾನೆಲ್ ಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿರುತ್ತಾರೆ. ಅಲ್ಲದೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಹಾಡಿ ಹಲವಾರು ಬಹುಮಾನ ಗಳನ್ನು ಪಡೆದಿದ್ದಾರೆ.

ಇವರಿಗೆ ವಾಷ್ಠರ್ 5 ಸ್ಟಾರ್ ವತಿಯಿಂದ ಪ್ರತಿಭಾ ಸಿಂಚನ, ಗಾನಸಿರಿ ವತಿಯಿಂದ lockdown ನೈಟಿಂಗೇಲ್, R.P creations ವತಿಯಿಂದ ಬಾಲ ಪ್ರತಿಭಾ ರತ್ನ, waw ಸಿನಿಮಾ ವತಿಯಿಂದ best talent, ಅವಾರ್ಡ್ ಗಳು ದೊರಕಿರುತ್ತದೆ. ಇವರು ಸಂಗೀತ ಮಾತ್ರವೇ ಅಲ್ಲದೆ ಚೆಸ್, ಕಬಡ್ಡಿ ಅಂತಹ ಆಟ ಗಳಲ್ಲೂ, ಶಾಲಾ ಚಟುವಟಿಕೆಗಳಲ್ಲಿಯೂ ಮುಂದೆ.

ಅಲ್ಲದೆ ಅನೇಕ ನಾಟಕ ಗಳಲ್ಲಿಯೂ ಆಲ್ಬಂಗಳಲ್ಲಿ ಅಭಿನಯಿಸಿದ್ದಾರೆ. 2024, ಮತ್ತು 2026 ರ ಸ್ಕೌಟ್ಸ್ ಅಂಡ್ ಗೈಡ್ಸ ವತಿಯಿಂದ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ ಇವರ ತಂಡ ಸತತ 2 ಬಾರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಶ್ರೀ ಗುರು ರಾಘವೇಂದ್ರ ಮಕ್ಕಳ ಭಜನಾ ತಂಡ ಎಂಬ ತಂಡವನ್ನು ರಚಿಸಿ ಅದರ ನಾಯಕತ್ವ ವಹಿಸಿ ಹಲವಾರು ಭಜನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

2025 ರಲ್ಲಿ ಚಿತೇಶ್ ಗ್ರೂಪ್ ಐವರ್ನಡು ಅವರು ನಡೆಸಿದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರ ತಂಡವು ಸುಳ್ಯ ತಾಲೂಕು ಮಟ್ಟದ ಮಕ್ಕಳ ಭಜನಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಭಗತ್ ಸಿಂಗ್ ಸೇವಾ ಟ್ರಸ್ಟ್ ನವರು ನಡೆಸಲಾದ ಜಿಲ್ಲಾ ದೇಶಭಕ್ತಿ ಗೀತೆಗಳನ್ನು ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು, ಸುಳ್ಯ ತಾಲೂಕು ಮಟ್ಟದ NSS ನವರು ನಡೆಸಲಾದ ಕನ್ನಡ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಪಡೆದಿರುತ್ತಾರೆ.

ಇತ್ತೀಚಿಗಷ್ಟೇ ವಾಯ್ಸ್ ಆಫ್ ನಮ್ಮ ಮೀಡಿಯಾ ಚಾನಲ್ ನವರು ನಡೆಸಲಾದ ಸುಗಮ ಸಂಗೀತ ರಿಯಾಲಿಟಿ ಶೋ ನಲ್ಲೀ ಸೆಮಿ ಫೈನಲ್ ಹಂತಕ್ಕೆ ತಲುಪಿರುತ್ತಾರೆ. 2026 ರ ಸುಳ್ಯ ತಾಲೂಕು ಮಕ್ಕಳ ದಸರಾ ಕಾರ್ಯಕ್ರಮ ದಲ್ಲಿ ಇವರ ನೇತೃತ್ವದ ತಂಡ ಜಾನಪದ ಸಮೂಹ ಗಾಯನ ದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ..ಇವರು ಕೇವಲ ಸಂಗೀತ ಭಜನೆ ಮಾತ್ರವಲ್ಲದೆ ಶಾಲಾ ಪಠ್ಯ ದಲ್ಲೂ ಮುಂದೆ ಇದ್ದು ಹಲವಾರು ಆಟೋಟ ಸ್ಪರ್ಧೆ ಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡಿರುತ್ತಾರೆ ಇವರ ಪ್ರತಿಭೆಯನ್ನು ಗುರುತಿಸಿ ವಾಯ್ಸ್ ಆಫ್ ಆರಾಧನಾ ಮುಖ್ಯಸ್ಥೆ ಪದ್ಮಶ್ರೀ ಮೇಡಂ ಇವರು ಹಲವಾರು ವೇದಿಕೆಗಳನ್ನು ಕಲ್ಪಿಸಿಕೊಟ್ಟು ಇದರ ಸಾಧನೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ.

LEAVE A REPLY

Please enter your comment!
Please enter your name here