ಕೃಷಿ ಭೂಮಿಯಲ್ಲಿ ಹಸಿರು ಹಸಿರು ಕನಸು ಅರಳಿಸಿದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಬಿನ ಯುವಕರು

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಸಹಯೋಗದೊಂದಿಗೆ ಯುವ ಕೃಷಿಕರಾದ ರಾಜೇಶ್ ಕೋಟ್ಯಾನ್ ರವರ ಮುಂದಾಳತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ನಮ್ಮ ನಡೆ ಕೃಷಿಯ ಕಡೆ ಸಂಕಲ್ಪದೊಂದಿಗೆ ಸಂಘದ ಸದಸ್ಯರಿಂದ ಗದ್ದೆ ನಾಟಿ ಕಾರ್ಯಕ್ರಮ ವಿಶೇಷವಾಗಿ ಆದಿತ್ಯವಾರ ಜರಗಿತು.
ಗದ್ದೆಯಲ್ಲಿ ಕೃಷಿ ಚಟುವಟಿಕೆಯ ಮೂಲಕ ಹಬ್ಬದ ಸಂಭ್ರಮ ನಿರ್ಮಾಣವಾಗಿತ್ತು. ತಂಡೋಪತಂಡವಾಗಿ ಬಂದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಗದ್ದೆಗಿಳಿದು ನಾಟಿ ಮಾಡಿದರು. ಒಂದು ಕಡೆ ಮಹಿಳಾ ಸದಸ್ಯರ ಮಾತುಗಾರಿಕೆ, ಇನ್ನೊಂದು ಕಡೆ ಹಾಡು, ಪಾಡ್ದಾನ, ಕಥೆಗಳನ್ನು ಹೇಳುತ್ತಾ ಗದ್ದೆ ನಾಟಿ ಮಾಡುವುದು ಕಂಡುಬಂತು. ಪುರುಷರ ಹಾಸ್ಯ ಭರಿತ ಮಾತು, ಹರಟೆಗಳಲ್ಲಿ ತೊಡಗಿದ್ದರು. ಮಕ್ಕಳು ಕೆಸರಿನಲ್ಲಿ ಆಟವಾಡುತ್ತ ಸಂಭ್ರಮಿಸಿದರು.
ನೇಜಿ ನಾಟಿಯಲ್ಲಿ ಪಾಲ್ಗೊಂಡಿದ್ದ ಯುವಕರು ಭತ್ತದ ಗದ್ದೆಯಲ್ಲಿ ನಾಟಿ ಮಾಡಿದರು. ಈ ಮೂಲಕ ಯುವ ಜನರು ಬೇಸಾಯವನ್ನು ಮರೆಯಬಾರದು ಎಂಬ ಸಂದೇಶ ಸಾರಿದರು.
ನೇಜಿ ನಾಟಿಗೂ ಮೊದಲು ಗದ್ದೆಯನ್ನು ಟ್ರಾಕ್ಟರ್ ಮೂಲಕ ಹೂಡಿ ಹದಗೊಳಿಸಲಾಯಿತು. ಬಳಿಕ ಐವತ್ತಕ್ಕೂ ಅಧಿಕ ಜನರು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಯಾಂತ್ರೀಕೃತ ಕೃಷಿ, ತೋಟಗಾರಿಕೆ, ಗದ್ದೆ ಕೃಷಿಯನ್ನು ಕೈಬಿಡುತ್ತಿರುವ ಈ ಸಮಯದಲ್ಲಿ ಕೃಷಿಗೆ ಜನರೇ ಸಿಗದ ಇಂದಿನ ಪರಿಸ್ಥಿತಿ ನಡುವೆ ಬೆರಣಗುಡ್ಡೆಯ ಗದ್ದೆಯಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಸ್ವಯಂ ಪ್ರೇರಿತವಾಗಿ ಕೃಷಿ ಸೇವೆ ಸಲ್ಲಿಸಿರುವುದು ವಿಶೇಷವೆನಿಸಿದೆ.
ಈ ಸಂದರ್ಭದಲ್ಲಿ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಸಂಚಾಲಕರಾದ ಸಂದೀಪ್ ವಿ. ಪೂಜಾರಿ, ಪೂರ್ವಧ್ಯಕ್ಷರುಗಳಾದ ಆನಂದ ಪೂಜಾರಿ, ದಿನೇಶ್ ಪೂಜಾರಿ, ಸುರೇಶ್ ಕಾಸರಬೈಲು, ರಾಜೇಶ್ ಕೋಟ್ಯಾನ್, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನ ಕೋಟ್ಯಾನ್, ಕಾರ್ಯಕ್ರಮದ ನಿರ್ದೇಶಕರಾದ ವೀಣಾ ಪೂಜಾರಿ, ಸಹ ನಿರ್ದೇಶಕರಾದ ಶಾಂತರಾಮ್ ಕುಲಾಲ್, ಅಬ್ಬನಡ್ಕ ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಸುವರ್ಣ ಕೆಮ್ಮಣ್ಣು, ಕಾರ್ಯದರ್ಶಿ ಸುಭಾಷ್ ಕೆಮ್ಮಣ್ಣು, ಭಜನಾ ಮಂಡಳಿಯ ಕಾರ್ಯದರ್ಶಿ ಶ್ರದ್ಧಾ ಪೂಜಾರಿ, ಸಂಘದ ಸದಸ್ಯರಾದ ಹರೀಶ್ ಪೂಜಾರಿ, ಶ್ರೀಕಾಂತ್ ಆಚಾರ್ಯ, ಲೀಲಾ ಪೂಜಾರಿ, ಹರಿಣಿ ಪೂಜಾರಿ, ಲಲಿತ ಆಚಾರ್ಯ ಸಂಧ್ಯಾ ಶೆಟ್ಟಿ, ವೀಣಾ ಆಚಾರ್ಯ, ಪದ್ಮಶ್ರೀ ಪೂಜಾರಿ, ಅನ್ನಪೂರ್ಣ ಕಾಮತ್, ಪುಷ್ಪ ಕುಲಾಲ್, ಆರತಿ ಮೊದಲಾದವರು ಉಪಸ್ಥಿತರಿದ್ದರು.

