ಜುಲೈ 17ರಂದು ಮೂಡುಬಿದಿರೆಯಲ್ಲಿ ಯಕ್ಷ ಸಂಭ್ರಮ 2026

0
4

ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿಯವರ 29ನೇ ವರ್ಷದ ಯಕ್ಷ ಸಂಭ್ರಮ ಜುಲೈ 17ರಂದು ಮೂಡುಬಿದಿರೆ ರಿಂಗ್ ರೋಡ್ ಪ್ರೀತಮ್ ಗಾರ್ಡನ್ ಹಾಲ್ ನಲ್ಲಿ ಮಧ್ಯಾಹ್ನ 2 ರಿಂದ ನಡೆಯಲಿದೆ. ನಂದಳಿಕೆ ವಿಶಾಲ ಯಕ್ಷಕಲಾ ಬಳಗದ ಕರ್ಣಾವಸಾನ, 4.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಅರ್ಥಧಾರಿ, ಸಂಘಟಕಿ ಪೂರ್ಣಿಮಾ ಪೇಜಾವರ, ಮೇಳ ವ್ಯವಸ್ಥಾಪಕ ಕರುಣಾಕರ ಶೆಟ್ಟಿ, ಕಲಾವಿದ ದಾಸಪ್ಪ ರೈ ಪುತ್ತೂರು ರವರುಗಳಿಗೆ ಸಂಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ ಹಾಲಾಡಿ ಮಂಡಳಿಯ ಪಂಜರ ಪಕ್ಷಿ ಯಕ್ಷಗಾನ ಪ್ರದರ್ಶನವಿದೆ.


ವರದಿ ರಾಯಿ ರಾಜ ಕುಮಾರ್