ಮೂಡುಬಿದಿರೆ : ಪುರಸಭೆಯ ಎದುರಿನ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಭೆ ಜುಲೈ 14ರಂದು ರಂಜಿತ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದು ಮರಣ ಹೊಂದಿದ ಇಬ್ಬರು ಸದಸ್ಯರ ಸಂಪೂರ್ಣ ಸಾಲವನ್ನು ಸಂಘದಿಂದ ಭರಿಸಲಾಗಿದೆ.
ಮಿಜಾರು ಶ್ರೀನಿಧಿ ಸ್ವಸಹಾಯ ತಂಡದ ಸುರೇಶರು ತಲೆಗೆ ಪೆಟ್ಟು ಬಿದ್ದು ಮರಣ ಹೊಂದಿದ ಕಾರಣ ಅವರ ಸಾಲ ರೂ 63,520/-ಹಾಗೂ ತೋಡಾರಿನ ತುಡರ್ ಸ್ವಸಹಾಯ ಸಂಘದ ಅಶೋಕ ಪರವ ಹೃದಯಘಾತದಿಂದ ಮರಣ ಹೊಂದಿದ್ದು ಅವರ ಸಂಪೂರ್ಣ ಸಾಲ ರೂ 39548/-ನ್ನು ಭರಿಸಲಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ ಸ್ವಸಹಾಯ ತಂಡದ ಅಸೌಖ್ಯ ಸದಸ್ಯರಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.
ಸಭೆಯಲ್ಲಿ ನಿರ್ದೇಶಕರುಗಳಾದ ಶಂಕರನಾರಾಯಣ ಭಟ್, ಸುರೇಶ್ ಪೂಜಾರಿ, ರಾಜೇಂದ್ರ ಬಿ, ರವೀಂದ್ರ ಕರ್ಕೇರ, ರಮೇಶ್ ಶೆಟ್ಟಿ, ಉಷಾ, ರತ್ನಾಕರ ಪೂಜಾರಿ, ಶರತ್ ಜೆ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು ರಾಜ್ಯಶೇಖರ ಮಧ್ಯಸ್ಥರು ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ್

