ಪುಷ್ಪ ಪ್ರಸಾದ್ ಉಡುಪಿ ಇವರು ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ – 2026 ಗೆ ಆಯ್ಕೆ

0
21

ಕಾಸರಗೋಡು : ಬೆಳಕು ಸೇವಾ ಫೌಂಡೇಶನ (ರಿ.) ಸೆಂಟ್ ಮೇರಿಸ್ ಸ್ಕೂಲ್ ಎದುರು, ಒಂದನೇ ಅಡ್ಡ ರಸ್ತೆ, ವಿವೇಕಾನಂದ ನಗರ, ತಿ.ನರಸಿಪುರ, ಮೈಸೂರು ಜಿಲ್ಲೆ – 571 124 ಇದರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆಸುವ ಕಾರ್ಯಕ್ರಮದಲ್ಲಿ ಪ್ರತಿಭೆಗಳ ಶ್ರಮ, ತ್ಯಾಗ, ಸಾಧನೆ ಮತ್ತು ಸಮಾಜ ಮೇಲಿನ ಕಾಳಜಿಯನ್ನು ಗುರುತಿಸಿ 36 ಜನರಿಗೆ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ – 2026 ಯನ್ನು ಕೊಡಲು ಆಯ್ಕೆಮಾಡಿರುತ್ತಾರೆ.

ಈ 36 ಜನರಲ್ಲಿ ಉಡುಪಿ ಜಿಲ್ಲೆಯಿಂದ ಪುಷ್ಪ ಪ್ರಸಾದ್ ಇವರು ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ – 2026 ಗೆ ಆಯ್ಕೆಯಾಗಿರುತ್ತಾರೆ ಎಂದು ಬೆಳಕು ಸೇವಾ ಫೌಂಡೇಶನ (ರಿ.) ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.

ವರದಿ : ಸುರೇಶ್ ಕುಮಾರ್ ಚಾರ್ವಕ