ವೆಂಕು ಪಣಂಬೂರಿಗೆ, ಕುಟ್ಟಿ ಕುಂದಾಪುರಕ್ಕೆ ಹೋದಂತೆ ತಿರುಗುವುದರಿಂದ ಏನು ಪ್ರಯೋಜನ-ಎಸ್ ಎಲ್ ಭೋಜೇಗೌಡ

0
11

ಮಳೆಯ ಅಭಾವದಿಂದ ಎದುರಾಗಿರುವ ಹಾನಿಯನ್ನು ಕಂಡು ವರದಿ ಮಾಡಲು ಜನತಾದಳದಿಂದ ಐದು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಬಹಳ ಕಳವಳಕಾರಿಯಾಗಿದೆ. ರೈತರ ಬಗ್ಗೆ ಕಾಳಜಿ ವಹಿಸಬೇಕಾದ ರಾಜ್ಯ ಸರ್ಕಾರವು ಎಚ್ಚೆತ್ತುಕೊಳ್ಳದೆ ರಾಜಕೀಯದಲ್ಲಿಯೇ ಮಗ್ನವಾಗಿದೆ. ಇನ್ನಾದರೂ ಮುಖ್ಯಮಂತ್ರಿಗಳು ಬರ ಪರಿಸ್ಥಿತಿಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಆಗ್ರಹಿಸುತ್ತೇನೆ.

ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ಹೊಂದಿರುವ ಆರೋಗ್ಯ ಮಂತ್ರಿಗಳು ದಿನಕ್ಕೆ ಮೂರು ಜಿಲ್ಲೆಗಳಿಗೆ ಚಲಿಸಿ ಏನು ಕಂಡುಕೊಂಡಿದ್ದಾರೆ? ಸುಳ್ಯ, ಪುತ್ತೂರು,ಇತ್ಯಾದಿ ತಾಲೂಕಿನಲ್ಲಿ ರೈತ ಸಮುದಾಯ ಅಡಿಕೆ, ಕಾಲು ಮೆಣಸು, ತೆಂಗು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಫಸಲ್ ಭೀಮಾ ಯೋಜನೆಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಅದನ್ನು ಸರಿಪಡಿಸಬೇಕು. ಉಳ್ಳಾಲದ ಸಮುದ್ರ ಬದಿಯ ಜನರು ಶಾಶ್ವತ ತಡೆ ಗೋಡೆ ಇಲ್ಲದೆ ಪ್ರತಿ ವರ್ಷವೂ ಕಷ್ಟ ನಷ್ಟ ಅನುಭವಿಸುತ್ತಿದ್ದಾರೆ. ಅವರದೇ ಕ್ಷೇತ್ರವಾಗಿಯೂ ಉಸ್ತುವಾರಿ ಸಚಿವರು ಜವಾಬ್ದಾರಿ ವಹಿಸದೆ ಇರುವುದು ಶೋಚನೀಯ ಸಂಗತಿ.

ಪ್ರತಿ ಜಿಲ್ಲೆಯಲ್ಲಿರುವ ಪ್ರಿನ್ಸಿಪಾಲ್ ಸೆಕ್ರೆಟರಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಬರ ಪರಿಸ್ಥಿತಿಯನ್ನು ಎದುರಿಸುವ ಎಲ್ಲ ಕಾರ್ಯಗಳನ್ನು ಜಿಲ್ಲಾಧಿಕಾರಿಗಳ ಹೊಣೆಗಾರಿಕೆಯಲ್ಲಿ ನೀಡುವ ಅಗತ್ಯವಿದೆ. ಉಸ್ತುವಾರಿ ಸಚಿವರಿಗೆ ಸಮಯವಿಲ್ಲದಿದ್ದಲ್ಲಿ ಮೇಲ್ಕಂಡ ಅಧಿಕಾರಿಗಳಿಂದ ಆದರೂ ತಕ್ಷಣ ಕಾರ್ಯಗಳನ್ನು ನಡೆಸಬೇಕಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಭೋಜೇಗೌಡರು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ರೊಂದಿಗೆ ಶಶಿ ರಾಜ್ ಶೆಟ್ಟಿ, ಮಾಧವ ಗೌಡ ಹಾಗೂ ಇತ್ಯಾದಿ ಜನತಾದಳದ ನೇತಾರರು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್