ಮಂಗಳೂರು : ಮಾಲೆಮಾರ್ ಅಂಬುರುಹ ಯಕ್ಷ ಕಲಾಕೇಂದ್ರದ ಎಂಟನೇ ವರ್ಷದ ಸಂಭ್ರಮ ಜುಲೈ 19ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಕುಣಿತ ಭಜನೆ, ಕಾವೂರು ಜನ ಸೇವಾ ಕೇಂದ್ರದಿಂದ ವಿವಿಧ ಉಚಿತ ಸೇವಾ ಸೌಲಭ್ಯಗಳು, ಮಧ್ಯಾಹ್ನ ಚಿಕ್ಕ ಮಕ್ಕಳಿಂದ ಯಕ್ಷಗಾನ, ಸಭಾ ಕಾರ್ಯಕ್ರಮ, ಉರ್ವ ಅಂಬು ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ಎಂಟು ಬಡ ಕುಟುಂಬಗಳಿಗೆ ಒಂದು ತಿಂಗಳ ದಿನಸಿ ಸಾಮಗ್ರಿ ವಿತರಣೆ ಹಾಗೂ ದೇವಿ ಶ್ರೀ ದೇವಿ ಯಕ್ಷಗಾನ ಮುಲ್ಲಕಾಡು ಕೋಟೆದ ಬಬ್ಬು ಸ್ವಾಮಿ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕುಮಾರ್ ಮಾಲೆ ಮಾರ ತಿಳಿಸಿದರು. ಈ ಸಂದರ್ಭದಲ್ಲಿ ಯಶೋಧ, ಹರಿಣಾಕ್ಷಿ, ಭಾರತಿ, ರಕ್ಷಣ್ ಕುಮಾರ್ ಮಂಚಿ, ಮೋಕ್ಷಿತ್ ಪೂಜಾರಿ, ಜಾನ್ವಿ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ್
.

