2025-26ರನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿ

0
48

ಕಡಂದಲೆ–ಪಾಲಡ್ಕ ಬಿಲ್ಲವ ಸಂಘಕ್ಕೆ ₹15 ಲಕ್ಷ ಅನುದಾನ; ಗುದ್ದಲಿ ಪೂಜೆಯೊಂದಿಗೆ ಕಾಮಗಾರಿ ಆರಂಭ

ಮೂಡುಬಿದಿರೆ : ಸರ್ಕಾರದ ಪ್ರದೇಶ ಅಭಿವೃದ್ಧಿ ನಿಧಿಯಿಂದ ಬಿಲ್ಲವ ಸಂಘ ಕಡಂದಲೆ–ಪಾಲಡ್ಕ ಕಟ್ಟಡ ನಿರ್ಮಾಣಕ್ಕಾಗಿ ₹15 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನದಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.

ಬಿಲ್ಲವ ಸಂಘದ ಅಧ್ಯಕ್ಷ ಲೀಲಾಧರ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರುವುದಕ್ಕೆ ಸಂಘದ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿ, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾಂಟ್ರಾಕ್ಟರ್ ಜಗನಾಥ್ ಪೂಜಾರಿ, ನಾರಾಯಣ ಪೂಜಾರಿ, ಶೇಖರ್ ಅಂಚನ್, ಲೀಲಾಧರ ಪೂಜಾರಿ, ಸೀತಾರಾಮ್ ಸಾಲ್ಯಾನ್, ನಿತೀನ್ ಕೇಮಾರ್, ಜಯ ಅಂಚನ್, ಪದ್ಮನಾಭ ಕಡೆಕರ್, ಸುಧಾಕರ್ ಅಂಚನ್ ಕುಕ್ಕುಂಜೆ, ನಾಗೇಶ್ ಅಂಚನ್ (ಕುಕ್ಕುಂಜೆ), ರಾಜೇಶ್ ಕೆಂಜ, ವಸಂತ್ ಸಾಲ್ಯಾನ್, ಜಾನಕಿ ವಸಂತ್, ಉದಯ ಪೂಜಾರಿ, ಶಿವರಾಮ್ ಅಮೀನ್ ಹಾಗೂ ಜಗದೀಶ್ ಸಾಲ್ಯಾನ್ ಪೂಪಾಡಿಕಲ್ಲು ಉಪಸ್ಥಿತರಿದ್ದರು.