ವಿಶ್ವದೀಪ ಟ್ರಸ್ಟ್ ವತಿಯಿಂದ ‘ನಾಟ್ಯೋತ್ಸವ ಪ್ರಸ್ತುತಿ-2’ ಸಾಂಸ್ಕೃತಿಕ ಸಂಭ್ರಮ

0
7

ಬೆಂಗಳೂರು : ವಿಶ್ವದೀಪ ಟ್ರಸ್ಟ್ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಸಹಯೋಗದೊಂದಿಗೆ ‘ನಾಟ್ಯೋತ್ಸವ ಪ್ರಸ್ತುತಿ-2’ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವೈಭವದಿಂದ ಬೆಂಗಳೂರಿನಲ್ಲಿ ಜರುಗಿತು. ನಾಗಸಂದ್ರ ಶ್ರೀ ಸಾಯಿಬಾಬಾ ದೇವಸ್ಥಾನ ಆವರಣದಲ್ಲಿ ನಡೆದ ನಾಟ್ಯೋತ್ಸವ ಕಾರ್ಯಕ್ರಮಕ್ಕೆ
ವಿದುಷಿ ಎಂ.ಕೆ. ವಾಸವಿ ಅವರು ಚಾಲನೆ ನೀಡಿದರು.

ಈ ಭವ್ಯ ಸಾಂಸ್ಕೃತಿಕ ವೇದಿಕೆಯಲ್ಲಿ ಮೃದಂಗ, ತಬಲ, ನೃತ್ಯ ಮತ್ತು ಸಂಗೀತ ಕ್ಷೇತ್ರದ ಹಲವು ಹೆಸರಾಂತ ಕಲಾಪ್ರತಿಭೆಗಳು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಪದ ಕಲಾವಿದರಾದ ಗಂಗಣ್ಣ ಮತ್ತು ತಂಡದವರು ಸಾಂಪ್ರದಾಯಿಕ ಕಲೆಯ ಸೊಗಡನ್ನು ಪಸರಿಸಿದರು. ಭರತನಾಟ್ಯ ನೆರೆದಿದ್ದವರ ಆಕರ್ಷಿಸಿತು.

ರಾಯರ ನೃತ್ಯ ಎಲ್ಲರನ್ನ ಮಂತ್ರ ಮುಗ್ಧರನ್ನಾಗಿಸ್ತು. ವಿಶ್ವದೀಪ ಟ್ರಸ್ಟ್‌ನ ಅಧ್ಯಕ್ಷರಾದ ದೀಪಾ ಎಂ. ಹಾಗೂ ಕಾರ್ಯದರ್ಶಿಯಾದ ವಿಶ್ವನಾಥ್ ಕೆ. ಅವರು ಕಾರ್ಯಕ್ರಮದ ನೇತೃತ್ವ ವಹಿಸಿ, ಆಗಮಿಸಿದ್ದ ಕಲಾಭಿಮಾನಿಗಳನ್ನು ಹಾಗೂ ಗಣ್ಯರನ್ನು ಆದರದಿಂದ ಸ್ವಾಗತಿಸಿದರು. ತೋಟದಗುಡ್ಡದಹಳ್ಳಿಯ ನಾಗಸಂದ್ರ ಭಾಗದ ನೂರಾರು ಕಲಾ ಆಸಕ್ತರು ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.