ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು 2026–27ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕೋತ್ತರ (PG) ವಿಭಾಗಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Faculty) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಗಸ್ಟ್ 1, 2026ರೊಳಗೆ ಅರ್ಜಿ ಸಲ್ಲಿಸುವಂತೆ ವಿಶ್ವವಿದ್ಯಾನಿಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವವಿದ್ಯಾನಿಲಯದ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸೋಷಿಯಲ್ ವರ್ಕ್, ಜಿಯೋಗ್ರಫಿ, ಲೈಬ್ರರಿ ಮತ್ತು ಇನ್‌ಫಾರ್ಮೇಷನ್ ಸೈನ್ಸ್, ಬಯೋಕೆಮಿಸ್ಟ್ರಿ, ಫಿಸಿಕ್ಸ್, ಕೆಮಿಸ್ಟ್ರಿ, ಎನ್ವಿರಾನ್‌ಮೆಂಟ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಮೆಟೀರಿಯಲ್ ಸೈನ್ಸ್, ಬಾಟನಿ, ಪ್ರಾಣಿಶಾಸ್ತ್ರ, ಸೈಬರ್ ಸೆಕ್ಯೂರಿಟಿ, ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್, ಬಯೋಟೆಕ್ನಾಲಜಿ, ಹ್ಯೂಮನ್ ಕಾನ್ಷಿಯಸ್‌ನೆಸ್ ಆ್ಯಂಡ್ ಯೋಗಿಕ್ ಸೈನ್ಸ್, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಗಣಿತ, ಮೈಕ್ರೋಬಯಾಲಜಿ, ಕಂಪ್ಯೂಟರ್ ಸೈನ್ಸ್/MCA, M.P.Ed, B.P.Ed, MBA, MBA (ಟೂರಿಸಂ), MBA (IB), ಸ್ಟಾಟಿಸ್ಟಿಕ್ಸ್, M.Ed ಹಾಗೂ ಕಾಮರ್ಸ್ ಸೇರಿದಂತೆ ಹಲವು ವಿಭಾಗಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕಗಳು ಸಾಕಾಗುತ್ತದೆ. ಆಯ್ಕೆ ಪ್ರಕ್ರಿಯೆ ಯುಜಿಸಿ (UGC) ನಿಯಮಾವಳಿ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನೀತಿಯಂತೆ ನಡೆಯಲಿದೆ.
ಅರ್ಜಿ ಶುಲ್ಕ
- ಸಾಮಾನ್ಯ ಹಾಗೂ ಇತರೆ ಅಭ್ಯರ್ಥಿಗಳು – ₹250
- SC/ST/ಪ್ರವರ್ಗ-1 ಅಭ್ಯರ್ಥಿಗಳು – ₹125
- ಹೆಚ್ಚುವರಿ ಪ್ರತಿ ವಿಷಯಕ್ಕೆ – ₹100
ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ Online Fees Collection ಮೂಲಕ ಪಾವತಿಸಿ, ಅದರ ಇ-ರಶೀದಿಯನ್ನು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು.
ಅಗತ್ಯ ದಾಖಲೆಗಳು
ಸಂದರ್ಶನಕ್ಕೆ ಹಾಜರಾಗುವ ವೇಳೆ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಪದವಿ ಹಾಗೂ ಸ್ನಾತಕೋತ್ತರ ಅಂಕಪಟ್ಟಿಗಳು, ಪದವಿ ಪ್ರಮಾಣಪತ್ರಗಳು, ಮೀಸಲಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ) ಹಾಗೂ SCOPUS/WOS/UGC-CARE ಪಟ್ಟಿಯಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳ ದಾಖಲೆಗಳನ್ನು ಮೂಲ ಹಾಗೂ ಸ್ವಯಂ ದೃಢೀಕರಿಸಿದ ಪ್ರತಿಗಳೊಂದಿಗೆ ಹಾಜರುಪಡಿಸಬೇಕು.
ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಸಂದರ್ಶನದ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿಶ್ವವಿದ್ಯಾನಿಲಯ ಮನವಿ ಮಾಡಿದೆ.

