ತಾರತಮ್ಯ ಹೋಗಲಾಡಿಸಿ, ಯುಕ್ತ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಿ-ದ ಕ & ಉಡುಪಿ ಜಿಲ್ಲಾ ಟ್ಯಾಕ್ಸಿ & ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್

0
8

ಕಳೆದ 57 ವರ್ಷಗಳಿಂದ ಪ್ರವಾಸಿಗರಿಗೆ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡಿ ಜನಸ್ನೇಹಿಯಾಗಿ ದ ಕ & ಉಡುಪಿ ಜಿಲ್ಲಾ ಟ್ಯಾಕ್ಸಿ & ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಸದಸ್ಯರು ಕಾರ್ಯಾಚರಿಸುತ್ತಿದ್ದಾರೆ. ಸುಮಾರು 12000 ಪ್ರವಾಸಿ ವಾಹನಗಳು ದಿನನಿತ್ಯ ಸಂಚಾರ ವ್ಯವಸ್ಥೆಯಲ್ಲಿ ಪ್ರವಾಸಿಗರಿಗೆ ಉತ್ತಮ ಹಾಗೂ ಪ್ರಾಮಾಣಿಕ ಸೇವೆಯನ್ನು ಒದಗಿಸುತ್ತಿದ್ದಾರೆ.

ಸರ್ಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ, ಮೋಟಾರ್ ವಾಹನ ಕಾಯ್ದೆಯ ನಿಯಮಕ್ಕೆ ಅನುಸಾರವಾಗಿ ಪ್ರವಾಸಿ ವಾಹನವನ್ನು ನಡೆಸುತ್ತಿರುವ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಗಳ ಮೇಲೆ ಸರಕಾರ ಅವೈಜ್ಞಾನಿಕವಾಗಿ ದರ ವಸೂಲಿಗೆ ಇಳಿದಿದೆ. ಇದು ಖಂಡನೀಯ.

ಆದುದರಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ನೀಡುತ್ತಿರುವ 1.ಡ್ರಾಪ್ ಮತ್ತು ಪಿಕಪ್ ನಂತೆ 10 ನಿಮಿಷ ಉಚಿತ ಕಾಲಾವಕಾಶವನ್ನು ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಗಳಿಗೂ ನೀಡಬೇಕು. 2. ಈ ಹಿಂದಿನಂತೆಯೇ ರೂ 100 ದರವನ್ನು ನಿಗದಿಪಡಿಸಬೇಕು. 3. ಖಾಸಗಿ ವಾಹನಗಳಂತೆ ಫಾಸ್ಟ್ ಟ್ಯಾಗ್ನ ಮೂಲಕವೇ ದರಪಾವತಿಸಲು ವ್ಯವಸ್ಥೆ ಮಾಡಬೇಕು.4. ಪ್ರವಾಸಿ ವಾಹನಗಳಿಗೆ ನಿಗದಿಪಡಿಸಿದ ಸಾಲಿನಲ್ಲಿ ಖಾಸಗಿ ವಾಹನಗಳಿಗೆ ಅವಕಾಶ ನೀಡಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಆನಂದ ಕೆ, ಕೇಳಿಕೊಂಡರು.

ಈಗಾಗಲೇ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಉಭಯ ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ಲಿಖಿತವಾಗಿ ದೂರು ಸಲ್ಲಿಸಿದ್ದರು ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಸಂಘದ ನೇತೃತ್ವದಲ್ಲಿ ಆಗಸ್ಟ್ ನಾಲ್ಕರಂದು ಮಂಗಳೂರು ಮಹಾನಗರ ಪಾಲಿಕೆಯ ಕಾವೂರು ಜಂಕ್ಷನ್ ಬಳಿ ಇರುವ ಟ್ಯಾಕ್ಸಿ ನಿಲ್ದಾಣದಲ್ಲಿ ಮೇಲ್ಕಂಡ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಸಂಕೇತಿಕವಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಬಂಧಪಟ್ಟವರು ಆಗಸ್ಟ್ ನಾಲ್ಕಕ್ಕೆ ಮೊದಲೇ ಈ ಕುರಿತು ಗಮನಹರಿಸಬೇಕೆಂದೂ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲೆ ಅಸೋಸಿಯೇಷನ್ ನ ರಮೇಶ್ ಕೋಟ್ಯಾನ್, ಉಪಾಧ್ಯಕ್ಷ ಹರಿಶ್ಚಂದ್ರ, ಕಾರ್ಯದರ್ಶಿ ಉದಯಕುಮಾರ್, ಖಜಾಂಚಿ ಸುರೇಶ್ ಸಾಲಿಯಾನ್, ರಾಜೇಶ್ ರಾಜರಿದ್ದರು.

ವರದಿ ರಾಯಿ ರಾಜ ಕುಮಾರ್