ಆಗಸ್ಟ್ 9ರಂದು ಕಾರ್ಕಳದಲ್ಲಿ ‘ಆತ್ಮ-ಪರಮಾತ್ಮ’ ಒಳ ಚಿಂತನ ಶಿಬಿರ

0
5

ಕಾರ್ಕಳ : ಕಾರ್ಕಳ ಟೈಗರ್ಸ್ ಸಹಭಾಗಿತ್ವದಲ್ಲಿ ಆತ್ಮಜ್ಞಾನಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ “ಆತ್ಮ-ಪರಮಾತ್ಮ: ಜೀವನದ ಸತ್ಯ ದರ್ಶನ” ವಿಷಯದ ಕುರಿತ ಒಳ ಚಿಂತನ ಶಿಬಿರವು ಆಗಸ್ಟ್ 9ರಂದು (ಭಾನುವಾರ) ಬೆಳಿಗ್ಗೆ 9.30 ಗಂಟೆಗೆ ಕಾರ್ಕಳದ ಎಸ್.ವಿ.ಟಿ ಶಿಕ್ಷಣ ಸಂಸ್ಥೆಯ (ಎಸ್.ವಿ.ಬಿ. ಪದವಿ ಪೂರ್ವ ಕಾಲೇಜು) ಸಭಾಂಗಣದಲ್ಲಿ ನಡೆಯಲಿದೆ.

ಆಧ್ಯಾತ್ಮಿಕ ಚಿಂತನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ವಿವಿಧ ಭಾಗಗಳಿಂದ ಭಕ್ತರು, ಆಧ್ಯಾತ್ಮಿಕ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಹಾಗೂ ಹೆಚ್ಚಿನ ಮಾಹಿತಿಗಾಗಿ 76191 15623 ಹಾಗೂ 70262 93111 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.