ಅತಿವೃಷ್ಟಿ–ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿ : ತಕ್ಷಣ ಪ್ರವಾಸಕ್ಕೆ ಡಿಸಿಎಂ ಸೂಚನೆ

0
14

ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಮಳೆ ಕೊರತೆಯಿಂದ ಬರದ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾವಾರು ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ತಮಗೆ ವಹಿಸಿರುವ ಜಿಲ್ಲೆಗಳಿಗೆ ತಕ್ಷಣ ಭೇಟಿ ನೀಡಿ, ಪ್ರತಿಯೊಂದು ತಾಲೂಕಿನಲ್ಲೂ ನೆಲಮಟ್ಟದ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಸಚಿವರು ಮಳೆ, ಬೆಳೆ ಹಾನಿ, ರಸ್ತೆ ಮತ್ತು ಮೂಲಸೌಕರ್ಯಗಳಿಗೆ ಉಂಟಾದ ಹಾನಿ, ಕುಡಿಯುವ ನೀರಿನ ಸಮಸ್ಯೆ, ಬರದ ಪರಿಸ್ಥಿತಿ ಸೇರಿದಂತೆ ಎಲ್ಲ ಅಂಶಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಸಂಗ್ರಹಿಸಿದ ಮಾಹಿತಿಯನ್ನು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಕ್ಷಣ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಸರ್ಕಾರವು ವಿಪತ್ತು ನಿರ್ವಹಣೆ, ಪರಿಹಾರ ಕ್ರಮಗಳು ಹಾಗೂ ತುರ್ತು ಕಾಮಗಾರಿಗಳ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಲು ಈ ವರದಿಗಳು ನೆರವಾಗಲಿವೆ ಎಂದು ತಿಳಿಸಲಾಗಿದೆ.

ಜಿಲ್ಲಾವಾರು ಸಚಿವರ ಉಸ್ತುವಾರಿ

  • ಡಾ. ಜಿ. ಪರಮೇಶ್ವರ್ – ತುಮಕೂರು
  • ಟಿ. ರಘುಮೂರ್ತಿ – ಚಿತ್ರದುರ್ಗ
  • ಬಿ.ಎಸ್. ಸುರೇಶ್ (ಬೈರತಿ) – ಚಿಕ್ಕಬಳ್ಳಾಪುರ
  • ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
  • ರಾಮಲಿಂಗಾರೆಡ್ಡಿ – ಕೋಲಾರ
  • ಹೆಚ್.ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ
  • ಬಿ.ಜೆ. ಜಮೀರ್ ಅಹ್ಮದ್ ಖಾನ್ – ವಿಜಯನಗರ
  • ಕೆ.ಜೆ. ಜಾರ್ಜ್ – ಚಿಕ್ಕಮಗಳೂರು
  • ಕೆ.ಎಂ. ಶಿವಲಿಂಗೇಗೌಡ – ಹಾಸನ
  • ಮಧು ಬಂಗಾರಪ್ಪ – ಶಿವಮೊಗ್ಗ
  • ಎಂ.ಬಿ. ಪಾಟೀಲ್ – ವಿಜಯಪುರ, ಬಾಗಲಕೋಟೆ
  • ವಿಜಯಾನಂದ ಕಾಶಪ್ಪನವರ – ದಾವಣಗೆರೆ
  • ಎಸ್.ಎಸ್. ಮಲ್ಲಿಕಾರ್ಜುನ – ದಾವಣಗೆರೆ
  • ರುದ್ರಪ್ಪ ಲಮಾಣಿ – ಹಾವೇರಿ
  • ಬಸವರಾಜ ರಾಯರೆಡ್ಡಿ – ಗದಗ
  • ಸತೀಶ್ ಜಾರಕಿಹೊಳಿ – ಬೆಳಗಾವಿ
  • ಸಂತೋಷ್ ಲಾಡ್ – ಧಾರವಾಡ
  • ಲಕ್ಷ್ಮಣ ಸವದಿ – ಉತ್ತರ ಕನ್ನಡ
  • ಪ್ರಿಯಾಂಕ್ ಖರ್ಗೆ – ಕಲಬುರಗಿ
  • ಅಜಯ್ ಧರಂ ಸಿಂಗ್ – ರಾಯಚೂರು
  • ಈಶ್ವರ್ ಖಂಡ್ರೆ – ಬೀದರ್
  • ಪಿ.ಎಂ. ನರೇಂದ್ರಸ್ವಾಮಿ – ಕೊಡಗು
  • ಯು.ಟಿ. ಖಾದರ್ – ದಕ್ಷಿಣ ಕನ್ನಡ, ಉಡುಪಿ
  • ಯತೀಂದ್ರ ಸಿದ್ದರಾಮಯ್ಯ – ಮೈಸೂರು
  • ಚೆಲುವರಾಯಸ್ವಾಮಿ – ಮಂಡ್ಯ
  • ಪುಟ್ಟರಂಗಶೆಟ್ಟಿ – ಚಾಮರಾಜನಗರ
  • ಬಿ. ನಾಗೇಂದ್ರ – ಬಳ್ಳಾರಿ
  • ಶರಣ ಪ್ರಕಾಶ ಪಾಟೀಲ್ – ಯಾದಗಿರಿ
  • ಶಿವರಾಜ್ ಸಂಗಪ್ಪ ತಂಗಡಗಿ – ಕೊಪ್ಪಳ
  • ಕೃಷ್ಣ ಬೈರೇಗೌಡ – ಬೆಂಗಳೂರು ನಗರ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಪ್ರವಾಹ, ಭೂಕುಸಿತ ಹಾಗೂ ಬೆಳೆ ಹಾನಿ ಉಂಟಾಗಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ವಾಸ್ತವ ಸ್ಥಿತಿಯನ್ನು ಸಚಿವರು ಪರಿಶೀಲಿಸಿ ಸಲ್ಲಿಸುವ ವರದಿಯ ಆಧಾರದ ಮೇಲೆ ಸರ್ಕಾರ ಮುಂದಿನ ಪರಿಹಾರ ಮತ್ತು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಿದೆ.