ಮೂಡುಬಿದಿರೆ ಮೊಸರು ಕುಡಿಕೆ ಈ ಬಾರಿ 2 ಕೃಷ್ಣ ವೇಷಧಾರಿಗಳ ನಿಯೋಜನೆ

0
9

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆಯ ಐತಿಹಾಸಿಕ 110 ನೇ ವರ್ಷದ ಮೂಡುಬಿದಿರೆ ಮೊಸರುಕುಡಿಕೆ ಉತ್ಸವವು ಇದೇ ಬರುವ ಸೆಪ್ಟೆಂಬರ್ 5 ರ ಶನಿವಾರದಂದು ಜರುಗಲಿರುವುದು.

ಮೆರವಣಿಗೆಯ ಉದ್ದಕ್ಕೂ ತೂಗುಹಾಕುವ ಮೊಸರುಕುಡಿಕೆಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಹಾಗೂ ಒಬ್ಬನೇ ಕೃಷ್ಣ ವೇಷಧಾರಿಗೆ ಹೊರೆ ಆಗಬಾರದು ಎಂಬ ಉದ್ದೇಶದಿಂದ ಈ ಸಲದ ಉತ್ಸವಕ್ಕೆ 2 ಕೃಷ್ಣವೇಷಧಾರಿಗಳನ್ನು ನಿಯೋಜಿಸುವುದೆಂದು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.