ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ 2026–27ನೇ ಲಯನಿಸ್ಟಿಕ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
25

ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ 2026–27ನೇ ಲಯನಿಸ್ಟಿಕ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬೀರಿಯ ವಾಣಿ ಆಡಿಟೋರಿಯಂನಲ್ಲಿ ಅತ್ಯಂತ ಗೌರವಯುತವಾಗಿ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ನೆರವೇರಿತು.

ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ ಅವರು ಅಧ್ಯಕ್ಷತೆ ವಹಿಸಿ ಸಭೆಯನ್ನು ಸ್ವಾಗತಿಸಿದರು. ರೀಜನ್ ಚೇರ್‌ಪರ್ಸನ್ ಲಯನ್ ಆಶಾ ನಾಗರಾಜ್, PMJF ಅವರು ಇನ್‌ಸ್ಟಾಲಿಂಗ್ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕ್ಲಬ್‌ಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ, 2026–27ನೇ ಸಾಲಿನ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದರು.

2026–27ನೇ ಸಾಲಿನ ನೂತನ ಪದಾಧಿಕಾರಿಗಳು :

ಅಧ್ಯಕ್ಷರು: ಲಯನ್ ವಿಜಯನ್ ಕೆ , ಕಾರ್ಯದರ್ಶಿ: ಲಯನ್ ಕೆ. ಗೋಪಿನಾಥ್, ಖಜಾಂಚಿ: ಲಯನ್ ನಿತೀಶ್ ಕೃಷ್ಣ

ಈ ಸಂದರ್ಭದಲ್ಲಿ ಗಣ್ಯ ಲಯನ್‌ಗಳಾದ ಲಯನ್ ಪಿ.ವಿ. ಅನಿಲ್ ಕುಮಾರ್ ಹಾಗೂ ಲಯನ್ ಭಾರತಿ ವಿನೋದ್ ಶೆಟ್ಟಿ ಅವರು ಶುಭಾಶಯಗಳನ್ನು ತಿಳಿಸಿ, ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸದಸ್ಯರನ್ನು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಕೆ. ಗೋಪಿನಾಥ್ ಅವರು ಕ್ಲಬ್‌ನ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಖಜಾಂಚಿ ಲಯನ್ ನಿತೀಶ್ ಕೃಷ್ಣ ಅವರು ವಂದನಾರ್ಪಣೆ ಸಲ್ಲಿಸಿದರು.