ಮಂಗಳೂರು ಕೋಡಿಕಲ್ ವಿಪ್ರ ವೇದಿಕೆಯಿಂದ ಆಗಸ್ಟ್ 16 ರಂದು ದಶಮ ಸಂಭ್ರಮ

0
7

ಮಂಗಳೂರು : ಕೋಡಿಕಲ್ ನ ಬೆನಕ ಜ್ಯೋತಿಷ್ಯಾಲಯದಲ್ಲಿ ನಾಗಮಂಡಲದ ಸಂದರ್ಭ ಒಟ್ಟಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರಿಂದ ಉದ್ಘಾಟಿಸಲ್ಪಟ್ಟ ವಿಪ್ರ ವೇದಿಕೆ ಅಗಸ್ಟ್ 16ರಂದು ದಿನಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹತ್ತು ವರ್ಷಗಳ ಸವಿ ನೆನಪಿನ ವಿಪ್ರ ಚಿತ್ರ ಸಂಚಯ ಸಂಚಿಕೆಯನ್ನು ಬಿಡುಗಡೆ ಮಾಡಲಿದೆ.

ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಬ್ರಾಹ್ಮಣ್ಯ ಮತ್ತು ಅನುಷ್ಠಾನ ವಿಷಯದ ಮೇಲೆ ವಿಚಾರಗೋಷ್ಠಿ, ವಿವಿಧ ವಿನೋದಾವಳಿ, ಸಾಂಸ್ಕೃತಿಕ, ಧಾರ್ಮಿಕ, ಯಕ್ಷಗಾನ, ಸಭಾ ಕಾರ್ಯಕ್ರಮಗಳು ಜರುಗಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ರವಿ ಅಲೆವೂರಾಯ ವರ್ಕಾಡಿ, ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ, ಉಪಾಧ್ಯಕ್ಷ ವಿಶ್ವೇಶ್ವರ ಭಟ್ ತೆಕ್ಕೆಕೆರೆ, ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್ ಕಟೀಲು, ಕೋಶಾಧಿಕಾರಿ ಕಿಶೋರ್ ಕೃಷ್ಣ ಕೆ ಯು ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್