ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

0
14

ಕೊಣಾಜೆ : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.), ಗ್ರಾಮಚಾವಡಿ, ಕೊಣಾಜೆ ಇದರ ಗುರು ಸಾನಿಧ್ಯದಲ್ಲಿ ನಡೆದ ವಾರದ ಗುರು ಪೂಜೆಯ ಸಂದರ್ಭದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

​ಸಂಘದ ಅಧ್ಯಕ್ಷರಾದ ವಿಜೇತ್ ಪಜೀರು ರವರು ಗುರು-ಹಿರಿಯರು, ಕಿರಿಯರು ಹಾಗೂ ಮಾತೆಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು.

​ಕಾರ್ಯಕ್ರಮದ ವಿವರಗಳು:-

ದಿನಾಂಕ 28-08-2026ನೇ ಶುಕ್ರವಾರದಂದು ಗಂಗಾಧರ ಶಾಂತಿ (ಪ್ರಧಾನ ಅರ್ಚಕರು, ಶ್ರೀ ಬ್ರಹ್ಮಬೈದರ್ಕಳ ಗರಡಿ, ಕಂಕನಾಡಿ) ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ.

​ಸ್ಪರ್ಧಾ ಕಾರ್ಯಕ್ರಮಗಳು:- ದಿನಾಂಕ 23-08-2026ನೇ ಆದಿತ್ಯವಾರ ಬೆಳಿಗ್ಗೆ 10:00 ಗಂಟೆಯಿಂದ ಸಂಘದ ಸಮುದಾಯ ಭವನದಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು (ಚಿತ್ರಕಲೆ, ಪ್ರಬಂಧ, ಭಾಷಣ, ರಸಪ್ರಶ್ನೆ) ಆಯೋಜಿಸಲಾಗಿದೆ.

​ಅನ್ನಸಂತರ್ಪಣೆ:- 28-08-2026ರಂದು ಮಧ್ಯಾಹ್ನ 1:00 ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.