ಕಲಾಕುಂಚದಿಂದ “ಅಂಚೆ ಕುಂಚ” ಶ್ರೀ ಗಣೇಶನ ಚಿತ್ರ ಬರೆಯುವ ಉಚಿತ ಸ್ಪರ್ಧೆಗೆ ಆಹ್ವಾನ

0
32

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವದ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡಿನಲ್ಲಿ ಶ್ರೀ ಗಣೇಶನ ಚಿತ್ರ ಬರೆಯುವ ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ತಿಳಿಸಿದ್ದಾರೆ.

ಶ್ರೀ ಗಣಪತಿ ಚಿತ್ರ ಬರೆಯುವ ಸ್ಪರ್ಧಿಗಳು ತಮ್ಮ ಹೆಸರು ವಯಸ್ಸು, ವ್ಯಾಟ್ಸಪ್ ಸಂಖ್ಯೆ ಹಾಕಬೇಕಾಗಿದೆ. ವಯೋಮಾನದೊಂದಿಗೆ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ಅವರವರ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಅಭಿನಂದನಾ ಪತ್ರವನ್ನು ಕಳಿಸುತ್ತೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.‌

ಯಾವುದೇ ಸಭೆ-ಸಮಾರಂಭ ಇಲ್ಲದೇ ಇಂತಹ ಶ್ರೀ ಗಣಪತಿ ಚಿತ್ರ ಬರೆದು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬೇಕಾಗಿದೆ. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ # 588, `ಕನ್ನಡ ಕೃಪ’, ಮೊದಲನೇ ಮಹಡಿ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ – 577002. ಹೆಚ್ಚಿನ ಮಾಹಿತಿಗೆ ಮೊ. 9538732777, 9945785170 ಈ ಸನೀಹವಾಣಿಗೆ ಸಂಪರ್ಕಿಸಬಹುದು. ಚಿತ್ರ ಬರೆದು ಕಳಿಸುವ ಕೊನೆಯ ದಿನಾಂಕ 10-09-2026 ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.