ಕಾಸರಗೋಡಿನಲ್ಲಿ ರಾಮಾಯಣ ಸತ್ಸಂಗ

0
34

ಕಾಸರಗೋಡು : ಆಷಾಡ ಮಾಸದಲ್ಲಿ ಪ್ರತಿವರ್ಷದಂತೆ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ನೇತೃತ್ವದಲ್ಲಿ ರಾಮಾಯಣ ಸತ್ಸಂಗ ಕಾರ್ಯಕ್ರಮ ಕಾಸರಗೋಡು ಹೃದಯ ಭಾಗದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಿತು.

2 ನೇ ದಿನದ ಕಾರ್ಯಕ್ರಮ ಹಿರಿಯ ಧಾರ್ಮಿಕ ಮುಂದಾಳು ಮೀರಾ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ವಿಎಚ್ ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ| ಕೆ.ಎನ್.ವೆಂಕಟ್ರಮಣ ಹೊಳ್ಳ, ವಿಶ್ವ ಹಿಂದೂ ಪರಿಷತ್ ಕಣ್ಣೂರು ವಿಭಾಗದ ಪ್ರಮುಖ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ವಿಎಚ್‌ಪಿ ಹಿರಿಯ ಕಾರ್ಯಕರ್ತ ಎ.ಟಿ.ನಾಯಕ್, ಉಪಾಧ್ಯಕ್ಷ ಗುಣಪಾಲ ಅಮೈ, ಲಕ್ಷ್ಮೀಕಾಂತ ನೆಲ್ಲಿಕುಂಜೆ ಉಪಸ್ಥಿತರಿದ್ದರು.

ಸುರೇಂದ್ರ ಆಚಾರ್ಯ ಶುಭಹಾರೈಸಿ ಮಾತಾಡಿದರು. ವಿಎಚ್‌ಪಿ ಕಾಸರಗೋಡು ಪ್ರಖಂಡ ಕಾರ್ಯದರ್ಶಿ ಕಿಶೋರ್ ಎಸ್.ವಿ.ಟಿ. ಸ್ವಾಗತಿಸಿ ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಧನ್ಯವಾದ ನೀಡಿದರು, ಕೆ.ಎನ್.ರಾಮಕೃಷ್ಣ ಹೊಳ್ಳ, ರವಿ ಕೇಸರಿ, ವಸಂತ್ ಕೆರೆಮನೆ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಇವರಿಂದ ರಾಮಾಯಣ ಪ್ರವಚನ ನಡೆಯಿತು.