ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಜೆ. ನಾಗೇಂದ್ರ ಕುಮಾರ್ ಆಯ್ಕೆ

0
9

ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 18ನೇ ವರ್ಷದ ಗಣೇಶೋತ್ಸವದ ಅಧ್ಯಕ್ಷರಾಗಿ (ಮಾಜಿ ಕಾರ್ಪೋರೇಟರ್) ಜೆ. ನಾಗೇಂದ್ರ ಕುಮಾರ್ ಇವರು ಪುನರ್ ಆಯ್ಕೆಯಾಗಿರುತ್ತಾರೆ.

ಸಂಘದ ನೂತನ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರಾಗಿ ಜೆ. ಅನಿಲ್ ಶೆಟ್ಟಿ ಮನ್ಕುತೋಟಗುತ್ತು ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರುಗಳಾಗಿ ಟಿ. ಪ್ರವೀಣ್‌ಚಂದ್ರ ಆಳ್ವ (ಕಾರ್ಪೊರೇಟರ್), ಉದಯ ಕೊಟ್ಟಾರಿ ಬಜಾಲ್, ಲ. ಶ್ರೀಧರ್‌ರಾಜ್ ಶೆಟ್ಟಿ ಕಡೆಕಾರ್, ಸುಧಾಕರ್ ಜೆ. ಕಂರ್ಬೆಟ್ಟು, ಲ. ಗಣೇಶ್ ಶೆಟ್ಟಿ ಕಂರ್ಬುಕೆರೆ ಹಾಗೂ ಲ. ಗಣೇಶ್ ಸಾಲಿಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ್ ವಿ. ಅಡಪ್ಪ, ಮುಖ್ಯ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಶೆಟ್ಟಿ ಬೀದಿಮನೆ ಹಾಗೂ ಕವಿತಾ ಗಂಗಾಧರ, ಪ್ರಧಾನ ಕೋಶಾಧಿಕಾರಿಯಾಗಿ ಶೈಲೇಶ್ ಭಂಡಾರಿ ತಾರ್ದೊಲ್ಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಜೆ. ಸುರೇಂದ್ರ (ಮಾಜಿ ಕಾರ್ಪೊರೇಟರ್), ನಾಗರಾಜ್ ಬಿ.ವಿ. ಕುಡ್ತಡ್ಕ, ಜಯಂತ್ ಡಿ. ಗಟ್ಟಿ, ಶ್ರೀನಿವಾಸ್ ಕೆ. ಎಕ್ಕೂರು, ಸುನಿಲ್ ಪೂಜಾರಿ ತಂದೊಳಿಗೆ, ಅನಿಲ್ ಕೊಟ್ಟಾರಿ, ಅಶೋಕ್ ರಾವ್ ಕೆ.ಎಸ್.ಆರ್.ಟಿ.ಸಿ., ಜೆ. ಶೇಖರ್ ಸನಿಲ್ ಕಂರ್ಬೆಟ್ಟು, ಪುಷ್ಪರಾಜ್ ಶೆಟ್ಟಿ ಕಂರ್ಬೆಟ್ಟು, ಶಿವರಾಜ್ ಬಿ. ಅಂಗಡಿಮಾರು, ಕೃಷ್ಣ ಶೆಟ್ಟಿ ಬಜೆಹಿತ್ಲು, ಅಶೋಕ ಕೋಟ್ಯಾನ್ ಕಂರ್ಬೆಟ್ಟು, ಗಣೇಶ್ ಆಚಾರ್ಯ, ಉಮೇಶ್ ಶೆಟ್ಟಿ ಕಂರ್ಬೆಟ್ಟು ಸೇರಿದಂತೆ ಕವಿತಾ ಕೃಷ್ಣ ಶೆಟ್ಟಿ, ಅಮಿತಾ ಸೀತಾರಾಮ್, ವಿಜಯಾ ಉಜ್ಜೋಡಿ, ಶಾಂತಿ ಶೆಟ್ಟಿ, ಸುಮತಿ ಚಂದ್ರಶೇಖರ್, ಸುಲೋಚನಾ ಮೇಲಾಂಟ, ಪುಷ್ಪಾವತಿ ಹಾಗೂ ಯಶವಂತಿ ರವೀಂದ್ರ ಆಯ್ಕೆಯಾಗಿದ್ದಾರೆ.

ಜತೆ ಕಾರ್ಯದರ್ಶಿಗಳಾಗಿ ದೇವರಾಜ್ ಜಪ್ಪು (ಟೈರ್ಸ್ ಕ್ಯಾಂಪ್), ಸಂತೋಷ್ ಕುಮಾರ್ ತಂದೊಳಿಗೆ ಹಾಗೂ ಶೀತಲ್ ತಂದೊಳಿಗೆ, ಜತೆ ಕೋಶಾಧಿಕಾರಿಗಳಾಗಿ ಚಂದ್ರಶೇಖರ ಕಿಲ್ಲೆ ಪಡುಹಿತ್ಲು ಹಾಗೂ ಕು. ದೀಪಿಕಾ ಕೇಶವ ಅಂಗಡಿಮಾರು ಆಯ್ಕೆಯಾಗಿದ್ದಾರೆ.

ವಿವಿಧ ಸಮಿತಿಗಳ ಪ್ರಧಾನ ಸಂಚಾಲಕರಾಗಿ ಜೆ. ಪ್ರಾಣೇಶ್ ರಾವ್ ತಂದೊಳಿಗೆ, ಸೀತಾರಾಮ್, ಹರೀಶ್ ಶೆಟ್ಟಿ ತಾರ್ದೊಲ್ಯ, ಹರ್ಬರ್ಟ್ ಡಿ’ಸೋಜಾ ಕಡೆಕಾರ್, ಚಂದ್ರಹಾಸ ಕುಲಾಲ್ ಕಂರ್ಬೆಟ್ಟು, ಎನ್. ಸುರೇಶ್ ಶೆಟ್ಟಿ ತಾರ್ದೊಲ್ಯ, ಅಮರನಾಥ ಭಂಡಾರಿ ತಾರ್ದೊಲ್ಯ, ಕೀರ್ತನ್ ಕುಮಾರ್ ತಂದೊಳಿಗೆ, ಶಿವಾನಂದ ರಾವ್ ಬಜೆಹಿತ್ಲು, ಗಣೇಶ್ ಪೂಜಾರಿ ಜಲ್ಲಿಗುಡ್ಡೆ, ಯೋಗೀಶ್ ರೈ ಬ್ರಹ್ಮರಬೆಟ್ಟು ಹಾಗೂ ಸುದೇಶ್ ಸನಿಲ್ ತಂದೊಳಿಗೆ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರು, ಮಹಿಳಾ ಕಾರ್ಯದರ್ಶಿಗಳು ಹಾಗೂ ಉಪ ಸಮಿತಿಗಳ ಸಂಚಾಲಕರುಗಳು ಒಟ್ಟು 148 ಜನರ ಸಮಿತಿಯನ್ನು ರಚಿಸಲಾಯಿತು.