ಸಂಸ್ಕಾರ ಭಾರತಿ ಗುರುವಂದನೆ ಪಂ. ಮಹಾಬಲೇಶ್ವರ ಭಾಗವತರಿಗೆ ಅಭಿನಂದನೆ

0
11

ಉಡುಪಿಯ ಸಂಸ್ಕಾರ ಭಾರತಿ ಸಮಿತಿಯ ವತಿಯಿಂದ ನಟರಾಜ ಪೂಜನ ಹಾಗೂ ಗುರುವಂದನ ಕಾರ್ಯಕ್ರಮದ ಅಂಗವಾಗಿ ಉಡುಪಿಯ ಪ್ರಸಿದ್ಧ ಹಿಂದೂಸ್ತಾನಿ ಸಂಗೀತದ ಗುರುಗಳಾದ ಪಂಡಿತ ಮಹಾಬಲೇಶ್ವರ ಭಾಗವತರಿಗೆ ಗುರುವಂದನೆ ಅರ್ಪಿಸಲಾಯಿತು. ಉಡುಪಿ ಗುಂಡಿಬೈಲಿನ ಅಭಿರಾಮಧಾಮ ಸಂಕೀರ್ತನಾ ಮಂದಿರದಲ್ಲಿ ನಡೆದ ಈ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರೊ. ಎಂ. ಎಲ್. ಸಾಮಗರು ಕಲಿಯು ಕೇವಲ ವಿಕಾಸಕ್ಕಾಗಿ ಅಲ್ಲ, ಅದು ಮನಸ್ಸಿನ ವಿಕಾಸಕ್ಕಾಗಿ, ಆಧ್ಯಾತ್ಮದ ಅನುಕೂಲಗಾಗಿ ಸಂಸ್ಕೃತಿಗಾಗಿ ಎಂದು ವಿವರಿಸಿದರು.

ಸಮಿತಿಯ ಅಧ್ಯಕ್ಷರಾದ ಉಪಾಧ್ಯಕ್ಷರಾದ ಡಾ. ಸುದರ್ಶನ ಪೆರ್ಲತ್ತಾಯರು ನಟರಾಜ ಕಲ್ಪನೆಯ ತಾತ್ವಿಕ ಹಿನ್ನೆಲೆ ಹಾಗೂ ಗುರುಪರಂಪರೆಯ ಮಹತ್ವದ ಮೇಲೆ ಚಿಂತನೆ ನಡೆಸಿದರು. ವಿದ್ವಾನ್ ರಾಮಕೃಷ್ಣ ಕೊಡಂಚರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಮಂಜರಿ ಚಂದ್ರ ಮತ್ತು ಅಭಿರಾಮದಾಮದ ಶಿಷ್ಯರುಂದದವರು ಸಂಸ್ಕಾರ ಭಾರತೀಯ ಧ್ಯೇಯ ಗೀತೆಯನ್ನು ಹಾಡಿದರು. ಕಲಾ ಶಿರೋಮಣಿ ಪಂ. ಮಹಾಬಲೇಶ್ವರರಿಗೆ ಗುರುವಂದನೆ ಅರ್ಪಿಸಿದ ಬಳಿಕ ಡಾ. ಮಂಜರಿ ಚಂದ್ರ ಶಿಷ್ಯರು ನಟರಾಜನ ಕುರಿತಾದ ನೃತ್ಯಗಳನ್ನು ಪ್ರಸ್ತುತಪಡಿಸಿದರು

ಈ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀಯ ಸಂಘಟನಾ ಮಂತ್ರಿ ರಾಮಚಂದ್ರ, ಪ್ರಾಂತ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಗಣೇಶ ಶೆಣೈ, ಸದಸ್ಯರಾದ ವಿದುಷಿ
ಲಕ್ಷ್ಮಿ ಗುರುರಾಜ್ ಗಣೇಶ್ ಬ್ರಹ್ಮಾವರ ಮೊದಲಾದವರು ಸಂಯೋಜನೆಯನ್ನು ಸಹಕರಿಸಿ ಉಪಸ್ಥಿತರಿದ್ದರು ಅಂಕಿತ ಗುರುಅವರ ಧನ್ಯವಾದಗಳೊಂದಿಗೆ ಶಾಂತಿ ಮಂತ್ರದೊಂದಗೆ ಕಾರ್ಯಕ್ರಮ ಕೊನೆಗೊಂಡಿತು.