ಉಡುಪಿ ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ , ಶ್ರೀ ಲಕ್ಷ್ಮೀ ವೆಂಕಟೇಶ ಸನ್ನಿಧಿಯಲ್ಲಿ ಭಜನಾ ಆರಾಧ್ಯ ದೇವರಾದ ವಿಠೋಬಾ ರುಖುಮಾಯಿ ಶ್ರೀ ದೇವರ ಸನ್ನಿಧಿಯಲ್ಲಿ ಈ ಬಾರಿಯ 126 ವರ್ಷದ ಭಜನಾ ಸಪ್ತಾಹ ಕೆ ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ ದೀಪ ಬೆಳಗಿಸಿ , ಮಹಾ ಮಂಗಳಾರತಿ ಬೆಳಗಿಸಿ ಚಾಲನೆ ನೀಡಿದರು , ಆಗಸ್ಟ್ 18 ಆರಂಭ ಗೊಂಡು 7 ದಿನಗಳ ಕಾಲ ಊರ ಪರಊರ ಭಜನಾ ತಂಡಗಳಿಂದ ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ ವೈಭವದಿಂದ ನೆಡೆಯಲಿದೆ ಆಗಸ್ಟ್ 25 ರಂದು ಮಂಗಳಾಚರಣೆ ನಡೆಯಲಿದೆ . ಧಾರ್ಮಿಕ ಪೂಜಾ ವಿಧಾನಗಳನ್ನು ಹಾಗೂ ಸಮೂಹಿಕ ಪ್ರಾರ್ಥನೆ , ದೇವರಿಗೆ ಮಹಾಪೂಜೆಯನ್ನು ಅರ್ಚಕರಾದ ದಯಾಘಾನ್ ಭಟ್ ನೆರವೇರಿಸಿದರು , ವಿನಾಯಕ ಭಟ್ , ದೀಪಕ್ ಭಟ್ , ಗಿರೀಶ್ ಭಟ್ ಸಹಕರಿಸಿದರು , ಶ್ರೀ ದೇವರಿಗೆ ವಿಶೇಷ ಅಲಂಕಾರ , ನೂರಾರು ಭಕ್ತರೂ ಭಕ್ತಿಯಿಂದ ಜೈ ವಿಠಲ್ ಹರಿ ವಿಠಲ್ ನಾಮ ಸ್ಮರಣೆ ಹಾಡುತ್ತ ಭಜನಾ ಸೇವೆ ಯಲ್ಲಿ ಪಾಲ್ಗೊಂಡರು ಆಡಳಿತ ಮಂಡಳಿಯ ಸದಸ್ಯರಾದ ಪ್ರಭಾಕರ್ ಭಟ್. ಅಶೋಕ್ ಬಾಳಿಗಾ , ಕೈಲಾಸನಾಥ ಶೆಣೈ , ಉಡುಪಿ ಆಭರಣ ಸಂಸ್ತೆಯ ಸುಭಾಸ್ ಕಾಮತ್ , ಪ್ರಕಾಶ್ ಭಕ್ತ , ಡಾ ವಿನಾಯಕ ಶೆಣೈ , ನಾರಾಯಣ ಪ್ರಭು , ವಸಂತ್ ಕಿಣಿ , ಮಹೇಶ್ ಶೆಣೈ , ವೆಂಕಟೇಶ್ ಭಟ್ . , ಶಾಂತಾರಾಮ್ ಪೈ , ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಭಾಸ್ಕರ ಶೆಣೈ , ಪಾಂಡುರಂಗ ಪೈ , , ಹರಿರಾಮ್ ಶೆಣೈ , ಗಣೇಶ್ ಕಿಣಿ , ವಿಶಾಲ್ ಶೆಣೈ ವಿಶ್ವನಾಥ್ ಭಟ್ , ಪಿ ವಿ ಶೆಣೈ ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರು , ಜಿ ಎಸ್ ಬಿ ಮಹಿಳಾ / ಯುವಕ ಮಂಡಳಿ ಸದಸ್ಯರು , ಶ್ರಾವಣ ಶನಿವಾರ ಭಜನಾ ಮಂಡಳಿ , ಭಗಿನಿ ವೃಂದ ಸದಸ್ಯರು ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು ಊರ ಪರ ಊರ ಭಜನಾ ಮಂಡಳಿ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು

