ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಕೆ ಎಸ್ ಹೆಗಡೆ ಮೆಡಿಕಲ್ ಅಕಾಡೆಮಿಗಳ ಕಿವಿ ಮೂಗು ಗಂಟಲು ( ಇ ಎನ್ ಟಿ) ವಿಭಾಗಗಳು ಜಂಟಿಯಾಗಿ 2026ರ ಆಗಸ್ಟ್ 20 ರಿಂದ ಆಗಸ್ಟ್ 23ರ ವರೆಗೆ ಮಂಗಳೂರಿನ ಅವತಾರ ಹೋಟೆಲ್ ಮತ್ತು ಕನ್ವೆನ್ಸನ್ ಸೆಂಟರ್ನಲ್ಲಿ SEOCON-2026 ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿವೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಇದು ಸೊಸೈಟಿ ಆಫ್ ಎಂಡೋಸ್ಕೋಪಿಕ್ ಓಟೊ ರೈನೋ ಲಾರಿಂಗೋಲಜಿ (SEO) ಇದರ ನಾಲ್ಕನೇ ಸಮ್ಮೇಳನ ವಾಗಿದೆ.
ಸೊಸೈಟಿ ಆಫ್ ಎಂಡೊಸ್ಕೋಪಿಕ್ ಆಟೋರೈನೊಲರಿಂಗೋಲಜಿ(SEO) ಎನ್ನುವುದು ಸಂಪೂರ್ಣವಾಗಿ ಪುಣೆಯ ETHENTS ಎಂಬ ಸಂಸ್ಥೆಯಿಂದ ನಿಯಂತ್ರಿಸಲ್ಪಡುವ ಹಾಗೂ ನಿರ್ವಹಿಸಲ್ಪಡುವ ಒಂದು ಸಂಘ, ಈ ಸಂಘವು ನಾವಿನ್ಯತೆ, ಉಪಕರಣಗಳು ಹಾಗೂ ತಂತ್ರಗಳ ಸಂಶೋಧನೆ, ಹಾಗೂ ಇತರರ ಸಹಯೋಗದೊಂದಿಗೆ ಎಂಡೋಸ್ಕೋಪಿಕ್ ಇ ಎನ್ ಟಿ ಸರ್ಜರಿಗಳ ಪ್ರಗತಿಯನ್ನು ಉತ್ತೇಜಿಸಲು ಬದ್ಧವಾಗಿದೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಿಪುಣತೆಯನ್ನು ವರ್ಧಿಸುವಲ್ಲಿ ಹಾಗೂ ಇದರ ಮೂಲಕ ರೋಗಿಗೆ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ವಿಶ್ವದಾದ್ಯಂತ ಇ ಎನ್ ಟಿ ತಜ್ಞರನ್ನು ಬೆಂಬಲಿಸುವ ಹಾಗೂ ಪ್ರೋತ್ಸಾ ಹಿಸುವ ಗುರಿಯನ್ನು SEO ಹೊಂದಿದೆ.
ಪುಣೆಯ “ತಲೆಗಾವ್” ನಲ್ಲಿನ ಹಿರಿಯ ಹಾಗೂ ಪ್ರಖ್ಯಾತ ಇ ಎನ್ ಟಿ ತಜ್ಞರಾದ ಡಾ. ಮುಬಾರಕ್ ಖಾನ್ ಈ ಸಂಘದ ಸ್ಮಾಪಕ ಅಧ್ಯಕ್ಷ. ಅವರ ಸಮರ್ಥ ನಾಯಕತ್ವದಲ್ಲಿ ಈ ಸಂಘವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚಿನ ಎತ್ತರವನ್ನು ತಲುಪಿ ಮನ್ನಣೆ ಗಳಿಸುತ್ತಿದೆ. “ಎಂಡೋಸ್ಕೋಪ್ ಟು ಮೈಕ್ರೋಸ್ಕೋಪ್ ಇ ಎನ್ ಟಿ -ಎಚ್‌ಎನ್‌ಎಸ್ -ನಾವಿನ್ಯತೆ ಹಾಗೂ ಮತ್ತಷ್ಟು” ಎಂಬ ಧೈಯ ರಕ್ತದ ಮೂಲಕ ಈ ಸಮ್ಮೇಳನವು ಶೈಕ್ಷಣಿಕ ಸಂಶೋಧನೆ ಹಾಗೂ ಕ್ಲಿನಿಕಲ್ ಶ್ರೇಷ್ಠತೆಯ ಮೂಲಕ ರೋಗಿಗಳ ಆರೈಕೆಯನ್ನು ಸುಧಾರಿಸಲು ಮತ್ತು, ವಿಶೇಷತೆಯನ್ನು ಮುನ್ನಡೆಸಲು ಒಗ್ಗೂಡುವ ಸಾಮೂಹಿಕ ದೃಷ್ಟಿ ಕೋನವನ್ನು ಸಾಕಾರಗೊಳಿಸುತ್ತವೆ.
ಕೆಎಂಸಿ ಮಂಗಳೂರಿನ ಇ ಎನ್ ಟಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ದೇವಿಪ್ರಸಾದ ಡಿ ಈ ಸಮ್ಮೇಳನದ ಸಂಘಟನಾ ಅಧ್ಯಕ್ಷರಾಗಿದ್ದು, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಇ ಎನ್ ಟಿ ವಿಭಾಗದ ಪ್ರಾಧ್ಯಾಪಕ ಆಗ ಮುಖ್ಯಸ್ಥ ಡಾ. ವಾದೀಶ ಭಟ್ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಅವರು ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಕೆಎಂಸಿ ಯ ಡೀನ್ ಡಾಉಣ್ಣಿಕೃಷ್ಣನ್ ಹಾಗೂ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಸಂದೀಪ್ ರೈ ಅವರ ಮಾರ್ಗದರ್ಶನದಲ್ಲಿ, ವಿಭಾಗದ ಎಲ್ಲಾ ಅಧ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನಡೆಸುತ್ತಿದ್ದಾರೆ.
ಸಮ್ಮೇಳನದ ಉದ್ಘಾಟನೆಯನ್ನು ಮುಂಬೈಯ ಪ್ರಸಿದ್ದ ಹಿರಿಯ ಇ ಎನ್ ಟಿ ತಡ್ಡರಾದ ಡಾ. ಮಿಲಿಂದ್ ಕೀರ್ತನೆಯವರು ನಡೆಸಲಿದ್ದಾರ. ಅವರು ಪದ್ಮಶ್ರೀ ಪ್ರಶಸ್ತಿ, ಹಾಗೂ ಡಾ. ಬಿ ಸಿ ರಾಯ್ ಪ್ರಶಸ್ತಿ ಪುರಸ್ಕೃತರು, ಅವರು 3000ಕ್ಕೂ ಹೆಚ್ಚು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದೇಶಾದ್ಯಂತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಾ, ತರಬೇತಿ ನೀಡಲು 70ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಉದ್ಘಾಟನಾ ಸಮಾರಂಭವನ್ನು 2026 ಆಗಸ್ಟ್ 21ರಂದು ಸಂಜೆ 7 ಗಂಟೆಗೆ ಮಂಗಳೂರಿನ ಅವತಾರ ಹೋಟೆಲ್ ಮತ್ತು ಕನ್ವೆನ್ನನ್ ಸೆಂಟರ್ನಲ್ಲಿ ನಡೆಸಲಾಗುವುದು.
ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ಸುಮಾರು 400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತಜ್ಞರುಗಳು ವಿವಿಧ ಭಾಷಣ, ಪ್ರದರ್ಶನ, ಚರ್ಚೆಗಳ ಮೂಲಕ ಇ ಎನ್ ಟಿ ವಿಭಾಗದ ವಿವಿಧ ಉಪ ವಿಶೇಷತೆಗಳಲ್ಲಿ.ನ ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ಇ ಎನ್ ಟಿ ಯಲ್ಲಿನ ನಾವಿನ್ಮತೆಗಳು ಸಿಮುಲೇಶನ್, ಕೃತಕ ತಂತ್ರಜ್ಞಾನ ಕುರಿತ ಉಪನ್ಯಾಸಗಳನ್ನು ಸಹ ನೀಡಲಾಗುತ್ತಿದೆ. ಪ್ರತಿನಿಧಿಗಳು ಸಹ ತಮ್ಮ ಪ್ರಬಂಧ ಹಾಗೂ ಪೋಸ್ಟರ್ ಮಂಡನೆಗಳ ಮೂಲಕ ತಮ್ಮ ಸಾಧನೆಗಳನ್ನು ಪ್ರಸ್ತುತಪಡಿಸಿ ಪ್ರಶಸ್ತಿ, ಹಾಗೂ ಬಹುಮಾನಗಳನ್ನು ಗೆಲ್ಲಲು ಅವಕಾಶಗಳಿವೆ. ಇದು ಜ್ಞಾನ ವಿನಿಮಯ, ಯಶಸ್ಸಿ ಯೋಜನೆಗಳ ಪ್ರದರ್ಶನ ಹಾಗೂ ಇ ಎನ್ ಟಿ ಕ್ಷೇತ್ರದಲ್ಲಿನ ಬೆಳವಣಿಗೆಗಳ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಇ ಎನ್ ಟಿ ಕ್ಷೇತ್ರದಲ್ಲಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ತನ್ಮೂಲಕ ಇ ಎನ್ ಟಿ ತಜ್ಞರು ರೋಗಿಗಳಿಗೆ ಶ್ರೇಷ್ಠ ಮಟ್ಟದ ಆರೈಕೆಯನ್ನು ನೀಡಲು ಸಾಧ್ಯವಾಗುತ್ತದೆ, ವಿವಿಧ ಸ್ಥಳದಿಂದ ಬಂದು ಭಾಗವಹಿಸುವವರು ಈ ದಿನಗಳಲ್ಲಿ ವೈಜ್ಞಾನಿಕ ಹಬ್ಬವನ್ನು ಆನಂದಿಸುವುದಲ್ಲದೆ ಸ್ಮಳೀಯ ತಿಂಡಿ ತಿನಿಸುಗಳನ್ನು ಸವಿಯುವುದರ ಜೊತೆಗೆ ತುಳುನಾಡಿನ ಶ್ರೇಷ್ಠ ಸಂಸ್ಕೃತಿ ಹಾಗೂ ಪರಂಪರೆಯನ್ನು ಅನುಭವಿಸುತ್ತಾರೆ, ಹೀಗಾಗಿ ಪ್ರತಿನಿಧಿಗಳು ವಿಜ್ಞಾನ ಹಾಗೂ ಸಂಸ್ಕೃತಿಯ ಉತ್ಕೃಷ್ಟ ಅನುಭವವನ್ನು ಪಡೆದು ಹಿಂದಿರುಗಿ ನಮ್ಮ ತುಳುನಾಡಿನ ನೆನವನ್ನು ಹಸುರಾಗಿರಿಸಬಹುದು.
