ಮೂಡುಬಿದಿರೆಯಲ್ಲಿ ಸೆ.4-5ರಂದು ‘ಕುಣಿತ ಭಜನಾ ವೈಭವ’

0
87

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆ ವತಿಯಿಂದ ಸೆಪ್ಟೆಂಬರ್ 5ರಂದು ನಡೆಯಲಿರುವ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಟೀಮ್ ಬೆದ್ರದ ಪಿಲಿ ಸಾರಥ್ಯದಲ್ಲಿ ‘ಕುಣಿತ ಭಜನಾ ವೈಭವ’ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ 15ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿ ಭಕ್ತಿ ಸಂಗಮ ನಡೆಸಲಿವೆ. ಜೊತೆಗೆ 150ಕ್ಕೂ ಅಧಿಕ ಪುಟಾಣಿ ಮಕ್ಕಳಿಂದ ಕುಣಿತ ಭಜನೆ ಹಾಗೂ 30ಕ್ಕೂ ಅಧಿಕ ರಾಧಾ–ಕೃಷ್ಣ ವೇಷಧಾರಿಗಳಿಂದ ವಿಶೇಷ ಪ್ರದರ್ಶನ ನಡೆಯಲಿದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.