ಡೊಂಬಿವಲಿ : ಕಳೆದ 12 ವರ್ಷಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಭಜನೆ, ಪೂಜೆ, ಅಯ್ಯಪ್ಪ ಮಹಾಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಪ್ರತಿ ವರ್ಷ ನಡೆಯುವ ಅಯ್ಯಪ್ಪ ಮಹಾಪೂಜೆಯಲ್ಲಿ ಸುಮಾರು 2,000ರಿಂದ 3,000ಕ್ಕೂ ಅಧಿಕ ಅಯ್ಯಪ್ಪ ಭಕ್ತರು ಭಾಗವಹಿಸಿ, ತೀರ್ಥಪ್ರಸಾದ ಹಾಗೂ ಅನ್ನಪ್ರಸಾದದ ಸೇವೆಯನ್ನು ಪಡೆದುಕೊಳ್ಳುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳು ಮಂಡಳಿಯ ಅಧ್ಯಕ್ಷರಾದ ಶ್ರೀ ದಿನೇಶ್ ಮೊಗವೀರರವರ ನೇತೃತ್ವದಲ್ಲಿ, ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ಒಗ್ಗಟ್ಟಿನ ಶ್ರಮದಿಂದ ನಡೆಯುತ್ತಿವೆ.
ಮಂಡಳಿಯ ಎಲ್ಲಾ ಕಾರ್ಯಗಳಿಗೆ ಸದಸ್ಯರು ಹಾಗೂ ದಾನಿಗಳ ಸಹಕಾರವೇ ಪ್ರಮುಖ ಶಕ್ತಿಯಾಗಿದೆ. ಮಂಡಳಿಯು 21 ಮೇ 2026ರಂದು ಅಧಿಕೃತವಾಗಿ ನೋಂದಣಿಗೊಂಡಿದೆ.
ಮುಂದಿನ ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಮಂಡಳಿಗೆ ಸ್ವಂತ ಸ್ಥಳದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕಾರ್ಯಾರಂಭವಾಗಿದ್ದು, ಸದಸ್ಯರು ಹಾಗೂ ದಾನಿಗಳಿಂದ ನಿಧಿಸಂಗ್ರಹಣೆಯೂ ಆರಂಭವಾಗಿದೆ. ಆದರೆ ಸ್ವಂತ ಸ್ಥಳದ ಕನಸನ್ನು ನನಸು ಮಾಡಲು ಇನ್ನೂ ಹೆಚ್ಚಿನ ನಿಧಿಯ ಅಗತ್ಯವಿದೆ.
ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆ ಹಾಗೂ ಭಕ್ತರ, ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ಈ ಮಹತ್ವದ ಗುರಿಯೂ ಸಾಕಾರಗೊಳ್ಳಲಿದೆ ಎಂಬ ಭರವಸೆ ಮಂಡಳಿಗಿದೆ.
“ಸ್ವಂತ ಸ್ಥಳ – ಶಾಶ್ವತ ಸೇವೆ” ಎಂಬ ಆಶಯದೊಂದಿಗೆ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಮುಂದಿನ ಹೆಜ್ಜೆ ಇಡುತ್ತಿದೆ.

