ಕಾಸರಗೋಡು ತಾಲೂಕು ಮಟ್ಟದ ಓಣಂ ಹಬ್ಬದ ಆಚರಣೆ

0
69

ಕೇರಳ ರಾಜ್ಯ ಬ್ಯೂಟಿಷ್ಯನ್ಸ್ ಅಸೋಸಿಯೇಷನ್ (KSBA) ಇದರ ಕಾಸರಗೋಡು ತಾಲೂಕು ಮಟ್ಟದ ಓಣಂ ಹಬ್ಬದ ಆಚರಣೆಯು ತಾ.02-08-2026ರಂದು ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ (ರಿ)ಇದರ ಆಶ್ರಯದಲ್ಲಿ ಶ್ರೀ ಮಾತಾ ಕಲಾ ಮಂದಿರ ಕುಂಜತ್ತೂರು ಇಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಸೋಸಿಯೇಷನ ಅಧ್ಯಕ್ಷರಾದ ಎಂ‌ ಪಿ.ನಾರಾಯಣ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಮಹಿಳಾ ಅಧ್ಯಕ್ಷೆ ಶ್ಯಾಮಾ ನಾಯರ್, ಕಾಸರಗೋಡು ತಾಲೂಕು ಘಟಕದ ಅಧ್ಯಕ್ಷೆ ಪೂರ್ಣಿಮಾ, ಉಪ್ಪಳ ಬ್ಲೋಕ್ ಮಟ್ಟದ ಅಧ್ಯಕ್ಷೆ ನೀತಾ ಪಾರ್ಕರ್ ಉಪಸ್ಥಿತರಿದ್ದರು.

ಹಲವು ಒಳಾಂಗಣ ಆಟಗಳು,ತಿರುವಾದಿರ ನೃತ್ಯದೊಂದಿಗೆ ಸದಸ್ಯರು ಸಂಭ್ರಮಿಸಿದರು,ಓಣಂ ಸದ್ಯ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ಟ್ರಸ್ಟ್ ನಾ ಕಡೆಯಿಂದ ಜಯಶೀಲಾ ಟೀಚರ್, ವಾಸು ಕುಂಬ್ಳೆ, ರವಿ ಉಚ್ಚಿಲ್, ಚಂದ್ರಿಕಾ ಟೀಚರ್, ಕುಶಲಾಕ್ಷಿ ಕಣ್ವತೀರ್ಥ ಮತ್ತಿತರರು ಸಹಕರಿಸಿದರು.