1928ರಲ್ಲಿ ಉಡುಪಿಯಲ್ಲಿ ಎಸ್.ಯು. ಪಣಿಯಾಡಿ ಹಾಗೂ ಅಂಜಾರು ರಾಮಣ್ಣ ಹೆಗ್ಗಡೆಯವರ ನೇತೃತ್ವದಲ್ಲಿ ಆರಂಭಗೊಂಡು, 2028ಕ್ಕೆ ಶತಮಾನೋತ್ಸವದತ್ತ ಹೆಜ್ಜೆ ಇಡುತ್ತಿರುವ ‘ತುಳುವ ಮಹಾಸಭೆ’ಯ ವಿಸ್ತರಣೆಯ ಭಾಗವಾಗಿ ಮಂಗಳೂರು ವಲಯ ಸಮಿತಿಯನ್ನು ರಚಿಸಲಾಗಿದೆ.
ಸೆಪ್ಟೆಂಬರ್ 3ರಂದು ಮಂಗಳೂರು ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, “ನೂರು ವರ್ಷಗಳ ಪರಂಪರೆ – ಮುಂದಿನ ಶತಮಾನಕ್ಕೆ ಹೊಸ ಸಂಕಲ್ಪ” ಧ್ಯೇಯವಾಕ್ಯದೊಂದಿಗೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ ಈ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ವಲಯ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರು- ಕಿಶೋರ್ ಡಿ. ಶೆಟ್ಟಿ, ಉಪಾಧ್ಯಕ್ಷರು- ಮೊಹಮ್ಮದ್ ಅಗ್ಸರ್ , ಭಾರತಿ ರೈ, ಎಡ್ವರ್ಡ್ ಲೋಬೋ,ಪ್ರಧಾನ ಸಂಚಾಲಕರು- ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರಧಾನ ಕಾರ್ಯದರ್ಶಿ- ಚಂಚಲ ತೇಜೋಮಯ, ಕಾರ್ಯದರ್ಶಿ- ರಾಜೇಶ್ ಸ್ಕೈಲಾರ್ಕ್, ಅರವಿಂದ ಎನ್ಎಸ್, ಕೋಶಾಧಿಕಾರಿ- ಪತ್ರಕರ್ತ ಭಾಸ್ಕರ್ ರೈ ಕಟ್ಟ, ಮಾಧ್ಯಮ ಸಲಹೆಗಾರರು- ಪತ್ರಕರ್ತ ಪುಷ್ಪರಾಜ್ ಬಿ. ಯನ್., ಸಂಘಟನಾ ಕಾರ್ಯದರ್ಶಿ- ಸುಖಲತಾ ಸುವರ್ಣ, ಸಾಹಿತ್ಯ ವಿಭಾಗ ಸಲಹೆಗಾರರು- ರಘುವೀರ್, ಮಹಿಳಾ ವಿಭಾಗ ಸಂಚಾಲಕಿಯಾಗಿ ವಿಜಯಲಕ್ಷ್ಮಿ ನೇಮಕಗೊಂಡಿದ್ದಾರೆ.
ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ಅನುಮತಿ ಹಾಗೂ ರಾಜ್ಯ ಅಧ್ಯಕ್ಷ ದೇವೇಂದ್ರ ಹೆಗ್ಡೆ ಅವರ ಅನುಮೋದನೆಯೊಂದಿಗೆ ಈ ಸಮಿತಿ ರಚನೆಗೊಂಡಿದೆ. ಕಾರ್ಯಕ್ರಮದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ, ತುಳುವ ಮಹಾಸಭೆ ಜಿಲ್ಲಾಧ್ಯಕ್ಷ ಶಿವಪ್ರಸಾದ ಅಜಿಲ, ತುಳು ವರ್ಲ್ಡ್ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್,ಅವಿನ್ ಆಳ್ವ ಸೇರಿದಂತೆ ತುಳು ಭಾಷೆ-ಸಂಸ್ಕೃತಿಯ ಅಭಿಮಾನಿಗಳು ಹಾಗೂ ಸಮಾಜಮುಖಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ವಾಗತವನ್ನು ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಪ್ರಸ್ತಾವನೆಯನ್ನು ರಾಜೇಶ್ ಆಳ್ವ ಬದಿಯಡ್ಕ ನೆರವೇರಿಸಿದರು.
-ಮಂದಾರ ರಾಜೇಶ್

