ಕಟಪಾಡಿಯಲ್ಲಿ ಸೆ.14ರಿಂದ ಶ್ರೀ ವಿದ್ಯಾ ವಿನಾಯಕ ಮಹೋತ್ಸವ

0
11

ಕಟಪಾಡಿ : ತ್ರಿಶಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ವಿದ್ಯಾ ವಿನಾಯಕ ಮಹೋತ್ಸವವು ಸೆ.14ರಿಂದ 16ರವರೆಗೆ ಕಟಪಾಡಿಯ ಎಸ್.ವಿ.ಎಸ್. ಕ್ಯಾಂಪಸ್‌ನ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆ.14ರಂದು ಬೆಳಗ್ಗೆ 8ರಿಂದ 10.30ರವರೆಗೆ ಗಣಪತಿ ಪ್ರತಿಷ್ಠಾಪನೆ ಹಾಗೂ ಗಣಹೋಮ ನಡೆಯಲಿದ್ದು, ಬಳಿಕ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಭಜನೆ, 1ರಿಂದ 1.30ರವರೆಗೆ ಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 3ರಿಂದ 4.30ರವರೆಗೆ ಭಜನೆ ಹಾಗೂ ಸಂಜೆ 4.30ರಿಂದ 5ರವರೆಗೆ ಮಹಾಪೂಜೆ ನಡೆಯಲಿದೆ.

ಸೆ.15ರಂದು ಬೆಳಗ್ಗೆ 9.30ರಿಂದ 10ರವರೆಗೆ ಮಂಗಳಾರತಿ, 10ರಿಂದ 11ರವರೆಗೆ ‘ಚಿಂತನ–ಮಂಥನ’, 11.15ರಿಂದ 12.30ರವರೆಗೆ ಭಜನೆ ಹಾಗೂ 12.30ರಿಂದ 1ರವರೆಗೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2ರಿಂದ 4ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ 4.15ರಿಂದ 4.30ರವರೆಗೆ ಮಂಗಳಾರತಿ, 4.45ರಿಂದ 6.30ರವರೆಗೆ ಭಜನೆ ನಡೆಯಲಿದೆ. ಸಂಜೆ 6.30ರಿಂದ 8ರವರೆಗೆ ದೀಪೋತ್ಸವ, ಕುಣಿತ ಭಜನೆ ಹಾಗೂ ಮಹಾಪೂಜೆ ವಿಶೇಷ ಆಕರ್ಷಣೆಯಾಗಲಿದೆ.

ಸೆ.16ರಂದು ಬೆಳಗ್ಗೆ 9.30ರಿಂದ 10ರವರೆಗೆ ಮಂಗಳಾರತಿ ಹಾಗೂ 10ರಿಂದ ಮಧ್ಯಾಹ್ನ 12ರವರೆಗೆ ಮಹಾ ಭಜನೆ ನಡೆಯಲಿದೆ. ಮಧ್ಯಾಹ್ನ 12ರಿಂದ 12.30ರವರೆಗೆ ಮಂಗಳಾರತಿ ನೆರವೇರಲಿದ್ದು, 12.30ರಿಂದ 1.45ರವರೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮಧ್ಯಾಹ್ನ 2ರಿಂದ 2.30ರವರೆಗೆ ಅಷ್ಟವಧಾನ ಸೇವೆ ಹಾಗೂ ವಿಸರ್ಜನಾ ಪೂಜೆ ನಡೆಯಲಿದ್ದು, 2.30ರಿಂದ 4.30ರವರೆಗೆ ಗಣಪತಿ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮೂರು ದಿನಗಳ ಮಹೋತ್ಸವ ಸಂಪನ್ನಗೊಳ್ಳಲಿದೆ.

ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್, ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಸತ್ಯೇಂದ್ರ ಪೈ, ಆಡಳಿತ ವರ್ಗ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದ ಮತ್ತು ವಿದ್ಯಾರ್ಥಿ ವೃಂದದ ಸಹಕಾರದಲ್ಲಿ ಮಹೋತ್ಸವ ನಡೆಯಲಿದೆ.