ನಂದಿಗೋಣ ಪರಿವಾರ ಶಕ್ತಿಗಳ ಸಾನಿಧ್ಯ ಜೀರ್ಣೋದ್ಧಾರ ಸಮಿತಿ ರಚನೆ

0
27

ಅಧ್ಯಕ್ಷರಾಗಿ ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆ

ಕಾಪು : ಬೆಳಪು ಗ್ರಾಮದ ಕೆಐಎಡಿಬಿ ಕೈಗಾರಿಕಾ ವಲಯದಲ್ಲಿರುವ ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಲ್ಲಾರು ದಿವಾಕರ ಶೆಟ್ಟಿ ಮಸ್ಕತ್ ಹಾಗೂ ಬೆಟ್ಟಿಗೆ ಸುರೇಶ್ ತಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಾಧ್ಯಕ್ಷರಾಗಿ ಪಠೇಲ್ ಪ್ರಕಾಶ್ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಸುಶೀನ್ ಶೆಟ್ಟಿ ಪಣಿಯೂರುಗುತ್ತು, ಕೋಶಾಧಿಕಾರಿಯಾಗಿ ವಸುಂಧರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು ಹಾಗೂ ಜಂಟಿ ಕೋಶಾಧಿಕಾರಿಗಳಾಗಿ ಹರೀಶ್ ನಾಯಕ್ ಕಾಪು ಮತ್ತು ನರಸಿಂಹ ಜೆನ್ನಿ ಪಣಿಯೂರು ಅವರನ್ನು ನೇಮಕ ಮಾಡಲಾಗಿದೆ.

ಲೆಕ್ಕ ಪರಿಶೋಧಕರಾಗಿ ಸಿಎ ಅಪೇಕ್ಷೆ ಶೆಟ್ಟಿ ಹಾಗೂ ಸುರೇಶ್ ಪೂಜಾರಿ ಓಡಿಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಗಳಾಗಿ ನಿತಿನ್, ಸುರೇಶ್ ತಂತ್ರಿ, ರಮಾನಂದ ಪೂಜಾರಿ ಬೆಳಪು, ಭೋಜ ದೇವಾಡಿಗ, ಉದಯ ಶೆಟ್ಟಿ ಬೆಂಗಳೂರು, ಗಣೇಶ ಶೆಟ್ಟಿ ಪಣಿಯೂರು ಬರ್ಪಾಣಿ, ಪಿ.ಕೆ. ಗಣೇಶ ಗುಜರನ್ ಬೆಂಗಳೂರು, ಯೋಗೀಶ್ ಪೂಜಾರಿ ಬೆಳಪು ಹಾಗೂ ನಿತೇಶ್ ಕುಲಾಲ್ ಮಲಂಗೋಳಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿ ರಾಕೇಶ್ ಕೆ. ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಗ್ರಾಮದ ಪ್ರತಿನಿಧಿಗಳು ಹಾಗೂ ಮನೆತನಗಳ ಪ್ರತಿನಿಧಿಗಳು, ಗೌರವ ಸಲಹೆಗಾರರು, ಉಪಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಮಹಿಳಾ ವಿಭಾಗ, ಕಾರ್ಯಕಾರಿ ಸಮಿತಿ ಹಾಗೂ ವಿವಿಧ ಉಪಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸೆ.6ರಂದು ಪ್ರಶ್ನಾಚಿಂತನೆ

ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಬಂಧಿಸಿದಂತೆ ಸೆ.6ರಂದು ಬೆಳಗ್ಗೆ 9.30ರಿಂದ ಕೇರಳದ ಪ್ರಸಿದ್ಧ ಜ್ಯೋತಿಷಿಗಳ ಮೂಲಕ ಪ್ರಶ್ನಾಚಿಂತನೆ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ದಿನ ಬೆಳಗ್ಗೆ 4 ಗಂಟೆಗೆ ಎಲ್ಲೂರು ಉಳ್ಳಾಯ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಗೆ ಪಾದಯಾತ್ರೆ ಆಯೋಜಿಸಲಾಗಿದೆ. ಜೀರ್ಣೋದ್ಧಾರ ಕಾರ್ಯದ ಮುಂದಿನ ಹಂತಗಳ ಕುರಿತು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸಲು ಸಮಿತಿ ಮುಂದಾಗಿದೆ.

ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯವನ್ನು ಸಮರ್ಪಕವಾಗಿ ಕೈಗೊಂಡು, ಕ್ಷೇತ್ರದ ಧಾರ್ಮಿಕ ಪರಂಪರೆ ಹಾಗೂ ಸಾನಿಧ್ಯದ ಮಹತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.