
ಕುಳಾಯಿ : ಶ್ರೀ ಪುತ್ತಿಗೆ ಮಠ ಶಾಖೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಹೊಸಬೆಟ್ಟು-ಕುಳಾಯಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠ, ಹೊಸಬೆಟ್ಟು-ಕುಳಾಯಿ ಇದರ ಆಶ್ರಯದಲ್ಲಿ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆ.14ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೇಶವ ದೇವಾಡಿಗ, ಕಾರ್ಯಾಧ್ಯಕ್ಷರಾಗಿ ಹರಿಕೃಷ್ಣ ಎಂ. ಸಾಲ್ಯಾನ್, ಕೋಶಾಧಿಕಾರಿಯಾಗಿ ವಸಂತ ರಾಜ್ ಎಚ್ , ಪ್ರಧಾನ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಎಚ್., ಉಪ ಕಾರ್ಯದರ್ಶಿಯಾಗಿ ಸುಧೀಂದ್ರ ಹತ್ವಾರ್, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಶೆಟ್ಟಿ ಅಗರಮೇಲು ಹಾಗೂ ಮಹಿಳಾ ಘಟಕದ ಸಂಚಾಲಕರಾಗಿ ಕೆ. ಕಲಾವತಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ರಾಘವೇಂದ್ರ ಎಚ್.ವಿ., ಶ್ರೀನಿಧಿ ಎ. ಭಟ್, ರಮೇಶ ಗುರಿಕಾರ, ಜಯಶಂಕರ್ ಕೆ., ಶಶಿಧರ ಗುರಿಕಾರ, ಅಗರಿ ರಾಘವೇಂದ್ರ ರಾವ್, ಗಣೇಶ್ ಹೊಸಬೆಟ್ಟು, ಶಿವಪ್ರಸಾದ್ ಶೆಟ್ಟಿ, ಧನುರಾಜ್ ಅತ್ತಾವರ, ವಿಶ್ವೇಶ್ವರ ಬದವಿದೆ, ಪಿ.ಎಚ್. ಆನಂದ, ಸುಖಪಾಲ ಸಾಲ್ಯಾನ್, ಶ್ರೀನಿವಾಸ ನಾಯಕ್, ಪುರುಷೋತ್ತಮ ಬಂಗೇರ, ಯೋಗೇಶ್ ಕರ್ಕೇರ, ಆನಂದ ಭಂಡಾರಿ, ದೇವರಾಜ್ ಪುತ್ರನ್, ಸುಕುಮಾರ್ ಸುರತ್ಕಲ್, ಕೈಲಾಶ್ ತಡಂಬೈಲ್, ಅನಂತ ಭಟ್ ಹಾಗೂ ದಯಾಕರ್ ಕಾಂಚನ್ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಉಪಾಧ್ಯಕ್ಷರು, ಜೊತೆ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಸಂಚಾಲಕರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಸೆ.14ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಸೆ.14ರಂದು ಸೋಮವಾರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ ನಡೆಯಲಿದ್ದು, ಬಳಿಕ ಗಣಹೋಮ, ಮಹಾಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಲಿವೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಜೆ ಪೂಜಿತ ಶ್ರೀ ಗಣಪತಿ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯ ಬಳಿಕ ರಾತ್ರಿ ಅರಬ್ಬೀ ಸಮುದ್ರದ ಕಿನಾರೆಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಗಣಪತಿ ವಿಗ್ರಹ ವಿಸರ್ಜನೆ ನಡೆಯಲಿದೆ.
ಗಣೇಶೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.
