ಭಜನಾ ತಂಡಗಳಿಂದ ದಿನಾಂಕ ಹಾಗೂ ಸಮಯ ನೋಂದಣಿಗೆ ಮನವಿ
ಮಾಣಿಲ : ಮಾಣಿಲ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಧಾಮ ಮಾಣಿಲದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನಾ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ಅ.11ರಿಂದ ಅ.22ರವರೆಗೆ ನಡೆಯಲಿರುವ ನವರಾತ್ರಿಯ 11 ದಿನಗಳ ಅವಧಿಯಲ್ಲಿ ಶ್ರೀ ಕ್ಷೇತ್ರದಲ್ಲಿ ಭಜನಾ ತಂಡಗಳು ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನಾ ಸೇವೆ ಸಲ್ಲಿಸಬಹುದಾಗಿದೆ. ಪ್ರತಿದಿನ ಒಟ್ಟು ನಾಲ್ಕು ಭಜನಾ ತಂಡಗಳಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಭಜನಾ ಸೇವೆಗೆ ಬೆಳಿಗ್ಗೆ 8ರಿಂದ 10 ಗಂಟೆ, 10ರಿಂದ ಮಧ್ಯಾಹ್ನ 12 ಗಂಟೆ, ಮಧ್ಯಾಹ್ನ 2ರಿಂದ 4 ಗಂಟೆ ಹಾಗೂ 4ರಿಂದ ಸಂಜೆ 6 ಗಂಟೆ ವರೆಗೆ ನಾಲ್ಕು ಅವಧಿಗಳನ್ನು ನಿಗದಿಪಡಿಸಲಾಗಿದೆ.
ಶ್ರೀ ಕ್ಷೇತ್ರದಲ್ಲಿ ಭಜನಾ ಸೇವೆ ಸಲ್ಲಿಸಲು ಇಚ್ಛಿಸುವ ಭಜನಾ ತಂಡಗಳು ತಮಗೆ ಅನುಕೂಲವಾಗುವ ದಿನಾಂಕ ಹಾಗೂ ಸಮಯವನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಕ್ಷೇತ್ರದ ವತಿಯಿಂದ ಮನವಿ ಮಾಡಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಭಜನಾ ಸಂಕೀರ್ತನೆಯ ಮೂಲಕ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಭಜನಾ ತಂಡಗಳು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಶ್ರೀ ಧಾಮ ಮಾಣಿಲ – 7356966216 ಸಂಪರ್ಕಿಸಬಹುದು.
